ಸಮಗ್ರ ಸುದ್ದಿ

ರಾಷ್ಟ್ರೀಯ ಜನಗಣತಿ -2027 ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ : ಕೆ ಎನ್ ರಮೇಶ್

Share

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರದೇಶದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ-2027 ಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯವು ಏಪ್ರಿಲ್ 16 ರಿಂದ ಮೇ 15 ರವರೆಗೆ ನಡೆಯಲಿದ್ದು, ಈ ಸಮೀಕ್ಷಾ ಕಾರ್ಯಕ್ಕೆ 4678 ಗಣತಿದಾರರು, 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿರುತ್ತದೆ.

ಜನಗಣತಿ ಸಿಬ್ಬಂದಿಗೆ ದಿನಾಂಕ:06-04-2026 ರಿಂದ ದಿನಾಂಕ 08-04-2026ರವರೆಗೆ ಒಟ್ಟು 16 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ನೀಡಿರುವ ಆದೇಶದಲ್ಲಿ ತರಬೇತಿ ಸ್ಥಳ ಹಾಗೂ ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

ತರಬೇತಿ ಕಾರ್ಯಕ್ಕೆ ಜನಗಣತಿ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗತಕ್ಕದ್ದು. ತಪ್ಪಿದಲ್ಲಿ, ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು.

ಜನಗಣತಿ ಕಾಯ್ದೆ, 1948 ರ ಸೆಕ್ಷನ್ 11 ಪ್ರಕಾರ ತಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

ನೀಡಲಾದ ಆದೇಶಗಳನ್ನು ಪಾಲಿಸದಿದ್ದಕ್ಕಾಗಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 ರ ಕಲಂ 223 ಅಡಿಯಲ್ಲಿ ಪ್ರಥಮ ವರ್ತಮಾನ ವರದಿ (FIR) ದಾಖಲಿಸುವುದು.

ಸಂಪೂರ್ಣ ದುರ್ನಡತೆ ಮತ್ತು ಅವಿಧೇಯತೆಗಾಗಿ ಅಮಾನತ್ತು ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು.

ಅನಧಿಕೃತ ಗೈರುಹಾಜರಿಯನ್ನು ಕೆಲಸ ಮಾಡದ ದಿನ ಎಂದು ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.


Share

You cannot copy content of this page