ಬೆಂಗಳೂರು: ಕೆಲವು ಸುದ್ದಿವಾಹಿನಿಗಳು ಬೆಂಗಳೂರಿನ ನಗರ ಜಿಲ್ಲೆಯಲ್ಲಿ ಅಡುಗೆ ಅನಿಲ ಏಪ್ರಿಲ್ 23 ರವರೆಗೆ ಕೊರತೆಯಾಗಲಿದೆ ಎಂದು ಆಧಾರರಹಿತ ಸುದ್ದಿಯನ್ನು ಬಿತ್ತರಗೊಳಿಸುತ್ತಿರುವುದು ಕಂಡುಬಂದಿರುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಅಡುಗೆ ಅನಿಲ ದಾಸ್ತಾನು ಸಾಕಷ್ಟು ಇದ್ದು, ಯಾವುದೇ ಕೊರತೆ ಇಲ್ಲದಂತೆ ಪೂರೈಸಲಾಗುತ್ತಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ ಅವರು ಸ್ಪಷ್ಟಪಡಿಸಿದ್ದಾರೆ.
ಇಂತಹ ಆಧಾರ ರಹಿತ ವದಂತಿಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡುವ ಸಂಭವವಿರುತ್ತದೆ. ಯಾವುದೇ ಅಧಿಕೃತ ಸರ್ಕಾರಿ ಹೇಳಿಕೆಯ ಆಧಾರವಿಲ್ಲದೆ ಸುದ್ದಿವಾಹಿನಿಗಳು ಇಂತಹ ಸುವ್ಯವಸ್ಥೆಗೆ ಅಡ್ಡಿಪಡಿಸುವಂತಹ ಆಧಾರ ರಹಿತ ಸುದ್ದಿಗಳನ್ನು ಬಿತ್ತರಗೊಳಿಸದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗ ಜಿ ಜಗದೀಶ ಅವರು ತಿಳಿಸಿದ್ದು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.
