ಬೆಂಗಳೂರು: ಬರುವ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು, ನೈರುತ್ಯ ರೈಲ್ವೆ ಮೈಸೂರು ಮತ್ತು ಜೋದಪುರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ:
ರೈಲು ಸಂಖ್ಯೆ 06273 ಮೈಸೂರು – ಜೋದಪುರ್ ಎಕ್ಸ್‌ಪ್ರೆಸ್ ವಿಶೇಷ ಈ ರೈಲು ಮೈಸೂರು ನಿಲ್ದಾಣದಿಂದ ರಾತ್ರಿ 20:15 ಗಂಟೆಗೆ ಸೋಮವಾರಗಳಲ್ಲಿ, ಅಂದರೆ 13, 20 ಮತ್ತು 27 ಏಪ್ರಿಲ್ 2026 ರಂದು ಹೊರಡಲಿದ್ದು, ಜೋದಪುರ್ ಗೆ ಬುಧವಾರ 17:00 ಗಂಟೆಗೆ ತಲುಪಲಿದೆ.
ರೈಲು ಸಂಖ್ಯೆ 06274 ಜೋದಪುರ್ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ಈ ರೈಲು ಜೋದಪುರ್ ನಿಲ್ದಾಣದಿಂದ ರಾತ್ರಿ 22:45 ಗಂಟೆಗೆ ಗುರುವಾರಗಳಲ್ಲಿ, ಅಂದರೆ 16, 23 ಮತ್ತು 30 ಏಪ್ರಿಲ್ 2026 ರಂದು ಹೊರಡಲಿದ್ದು, ಮೈಸೂರಿಗೆ ಶನಿವಾರ 18:00 ಗಂಟೆಗೆ ತಲುಪಲಿದೆ.
