ಸಮಗ್ರ ಸುದ್ದಿ

ನನ್ನ ಇ-ಖಾತಾ ನನ್ನ ಹಕ್ಕು ಅಭಿಯಾನ”ಕ್ಕೆ ನಾಳೆಯಿಂದ ಅಧಿಕೃತ ಚಾಲನೆ

Share

ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳ ಆಸ್ತಿ ಮಾಲೀಕರಿಗೆ ಭೂ ದಾಖಲೆಗಳನ್ನು ಸುರಕ್ಷತೆ, ವಂಚನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾನ್ಯ ಉಪ ಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಹಾಗೂ ಡಿಜಿಟಲೀಕರಣ ಮಾಡಲಾಗಿದೆ. ಅವುಗಳಿಗೆ ಇ-ಖಾತೆಗಳನ್ನು ಸಿದ್ಧಪಡಿಸಿ, ವಿತರಿಸಲಾಗುತ್ತಿದೆ.

ಅದರಂತೆ, ರಾಜ್ಯ ಸರ್ಕಾರವು ಬೆಂಗಳೂರು ನಗರ ಭೂಮಾಲೀಕರ ಹಿತಕ್ಕಾಗಿ ಸರ್ಕಾರದ 6ನೇ ಗ್ಯಾರಂಟಿ “ಭೂ ಗ್ಯಾರಂಟಿ” ಯೋಜನೆ ಘೋಷಿಸಿದ್ದು, ಈ ಯೋಜನೆಗೆ ನಾಳೆ(ಮೇ16) ಅಧಿಕೃತ ಚಾಲನೆ ದೊರೆಯಲಿದೆ. ಬಿ ಖಾತಾ ದಿಂದ ಎ ಖಾತಾ ಪರಿವರ್ತನೆಗಾಗಿ ಮಾರ್ಗಸೂಚಿ ಬೆಲೆ ಶೇ. 5 ರ ಬದಲಿಗೆ ಶೇ. 2 ರಷ್ಟು ಮಾತ್ರ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯು ಕೇವಲ 100 ದಿನಗಳು ಮಾತ್ರ ಇರಲಿದ್ದು, ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

ಪ್ರತಿ ಕೇಂದ್ರದಲ್ಲಿಯೂ ಸುಮಾರು 100 ರಿಂದ 200 ನಾಗರಿಕರಿಗೆ ಸೇವೆ ಒದಗಿಸಲಾಗುತ್ತದೆ. 200ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ಅಂತಹವರಿಗೆ ಟೋಕನ್ ನೀಡಿ ಮುಂದಿನ ವಾರ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುವುದು. ಪ್ರತಿ ಶನಿವಾರ ಸುಮಾರು 5000 ನಾಗರಿಕರಿಂದ ಸೇವೆ ಒದಗಿಸುವ ಗುರಿಯಿದೆ.

ಪ್ರತಿ ಖಾತಾ ಅಭಿಯಾನ ಕೇಂದ್ರದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳು:

  • ನಾಗರಿಕ ಸಹಾಯ ಕೇಂದ್ರಗಳ(ಹೆಲ್ಪ್ ಡೆಸ್ಕ್ಸ್) ವ್ಯವಸ್ಥೆ
    ಆಸನ ಹಾಗೂ ಸರತಿ ಸಾಲು ವ್ಯವಸ್ಥೆ
  • ಸೂಚನಾ ಹಾಗೂ ಮಾಹಿತಿಯುಳ್ಳ ನಾಮಫಲಕಗಳ ವ್ಯವಸ್ಥೆ
  • ಪ್ರತ್ಯೇಖ ಕೌಂಟರ್‌ಗಳ ವ್ಯವಸ್ಥೆ
  • ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್‌ಗಳು, ಪ್ರಿಂಟರ್, ಸ್ಕ್ಯಾನರ್‌ಗಳ ವ್ಯವಸ್ಥೆ
  • ಪಾವತಿ ನೆರವು ವ್ಯವಸ್ಥೆ
  • ನುರಿತ ಸಿಬ್ಬಂದಿಗಳ ವ್ಯವಸ್ಥೆ

ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳು:

  • ಇ-ಖಾತಾ
  • ಹೊಸ ಇ-ಖಾತಾ
  • ಬಿ ಖಾತಾ ದಿಂದ ಎ ಖಾತಾ ಪರಿವರ್ತನೆ
  • ತುಂಬಾ ದಿನಗಳಿಂದ ಬಾಕಿ ಇರುವ ನಾಗರಿಕ ಅರ್ಜಿಗಳು, ತಿದ್ದುಪಡಿಗಳು ಹಾಗೂ ಅಹವಾಲುಗಳು, ಹೊಸ ಅರ್ಜಿದಾರರು ಹಾಗೂ ವಾಕ್-ಇನ್ ನಾಗರಿಕರಿಗೆ ಸಂಪೂರ್ಣ ಸೌಲಭ್ಯ ನೀಡಲಾಗುವುದು.
  • ಅಂತಿಮ ಇ-ಖಾತಾದಾರರಿಗೆ ನಿಮ್ಮ ಇ-ಖಾತಾ ಸಿದ್ದವಿದೆ, ಕೇಂದ್ರಕ್ಕೆ ಭೇಟಿ ನೀಡಿ ಮುದ್ರಿತ ಪ್ರತಿಯನ್ನು ಸಂಗ್ರಹಿಸಿ ಎಂದು ದೂರವಾಣಿ ಹಾಗೂ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡಲಾಗಿರುತ್ತದೆ.
  • ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕೆಂದ ತರಬೇತಿ ಕೂಡಾ ನೀಡಲಾಗುವುದು
  • ಈ ಕಾರ್ಯಕ್ರಮದ ಮೂಲಕ ಇ-ಖಾತಾ ಸೇವೆಗಳ ಕುರಿತ ನಾಗರಿಕರ ಅಹವಾಲುಗಳಿಗೆ ತಕ್ಷಣದ ಪರಿಹಾರ ಹಾಗೂ ಸ್ಥಳದಲ್ಲೇ ಸೇವಾ ಸೌಲಭ್ಯ ನೀಡಲಾಗುವುದು.

ಜಿಬಿಎ ವ್ಯಾಪ್ತಿಯ 5 ಬೆಂಗಳೂರು ನಗರ ಪಾಲಿಕೆಗಳಲ್ಲಿ ಬಾಕಿ ಇರುವ ಅರ್ಜಿಗಳು ಅಥವಾ ಕುಂದುಕೊರತೆಗಳನ್ನು ಹೊಂದಿರುವ ಎಲ್ಲಾ ನಾಗರಿಕರನ್ನು ಆಹ್ವಾನಿಸಲು ಎಸ್‌ಎಂಎಸ್, ಫೋನ್ ಕರೆಗಳು ಮತ್ತು ಸಾರ್ವಜನಿಕ ಸಂವಹನದ ಮೂಲಕ ವ್ಯಾಪಕ ನಾಗರಿಕ ಸಂಪರ್ಕವನ್ನು ಕೈಗೊಳ್ಳಲಾಗಿದೆ.

ಸಹಾಯಕ ಕಂದಾಯ ಅಧಿಕಾರಿಗಳು(AROs), ಕಂದಾಯ ನಿರೀಕ್ಷಕರು(RIs), ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಮತ್ತು ಸ್ಥಳದಲ್ಲೇ ವಿಲೇವಾರಿ ಮತ್ತು ಪರಿಹಾರ ಒದಗಿಸಲಿದ್ದಾರೆ.

ಭೂ ಗ್ಯಾರಂಟಿ ಯೋಜನೆ ಅನುಷ್ಠಾನದ ಭಾಗವಾಗಿ ಪ್ರತಿ ಶನಿವಾರವೂ ನನ್ನ ಖಾತಾ ನನ್ನ ಹಕ್ಕು ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ 2ನೇ ಮತ್ತು 4ನೇ ಶನಿವಾರದ ರಜಾದಿನಗಳಂದು ಸದರಿ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುವ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಬದಲಿಯಾಗಿ ಕೆಲಸದ ದಿನಗಳಂದು ಪರ್ಯಾಯವಾಗಿ ಒಂದು ದಿನ ಹೆಚ್ಚುವರಿ ರಜೆಯನ್ನು ಪಡೆಯಬಹುದಾಗಿರುತ್ತದೆ.

ನಾಗರಿಕರು ಖಾತಾ ಅಭಿಯಾನದ ಸ್ಥಳಕ್ಕೆ ಭೇಟಿ ನೀಡುವ ವೇಳೆ ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಹಾಜರಾಗಲು ವಿನಂತಿಸಲಾಗಿದೆ.

ಈ ಮಹತ್ವದ ಯೋಜನೆಯ ಉದ್ದೇಶ:

  • ಬಾಕಿ ಪ್ರಕರಣಗಳ ಗಣನೀಯ ಕಡಿಮೆ ಮಾಡುವುದು
  • ನಾಗರಿಕ ಅನುಕೂಲತೆಯನ್ನು ಸುಧಾರಿಸುವುದು
    ಪಾರದರ್ಶಕತೆ ಬಲಪಡಿಸುವುದು
  • ಸುಲಭ, ಪರಿಣಾಮಕಾರಿ ಹಾಗೂ ನಾಗರಿಕ ಸ್ನೇಹಿ ಇ-ಖಾತಾ ಸೇವೆ ಒದಗಿಸುವುದು

ನಾಗರಿಕ ಸೇವಾ ಸೌಲಭ್ಯ ಹಾಗೂ ಅಹವಾಲು ನಿವಾರಣೆಯನ್ನು ಮತ್ತಷ್ಟು ಬಲಪಡಿಸಲು, ಬೆಂಗಳೂರಿನಾದ್ಯಂತ ಪ್ರತಿ ಶನಿವಾರ 100 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಬಂಧ ನಾಳೆ 52 ಸ್ಥಳಗಳಲ್ಲಿ “ನನ್ನ ಖಾತಾ ನನ್ನ ಹಕ್ಕು ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಸ್ಥಳಗಳ ವಿವರ ಕೆಳಕಂಡಂತಿದೆ.

“ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನದ ಸ್ಥಳಗಳ ವಿವರ:

ಬೆಂಗಳೂರು ಪೂರ್ವ ನಗರ ಪಾಲಿಕೆ:

  1. ಮಾರತಹಳ್ಳಿ: ನ್ಯೂ ಹಾರಿಜಾನ್ ಕಾಲೇಜು, ಬೆಳ್ಳಂದೂರು, ಕಾಡುಬೀಸನಹಳ್ಳಿ.
  2. ವೈಟ್ ಫೀಲ್ಡ್: ವೈಟ್ ಫೀಲ್ಡ್ ಕ್ಲಬ್
  3. ಹೂಡಿ: ಪಾಲಿಕೆ ವಾರ್ಡ್ ಕಚೇರಿ, ಎಇಸಿಎಸ್ ಲೇಔಟ್, ದೊಡ್ಡನೆಕ್ಕುಂದಿ.
  4. ಕೆ.ಆರ್.ಪುರಂ: ಐಟಿಐ ಶಾಲೆ, ಐಟಿಐ ಕಾಲೋನಿ, ಕೆ.ಆರ್ ಪುರಂ.
  5. ಹೆಚ್.ಎ.ಎಲ್ ಏರ್ಪೋರ್ಟ್ ವಿಭಾಗ: ಎಸ್.ಸಿ.ಟಿ ಪಾಲಿಟೆಕ್ನಿಕ್, ಕಗ್ಗದಾಸಪುರ ಮುಖ್ಯ ರಸ್ತೆ.
  6. ಹೊರಮಾವು: ನ್ಯಾಷನಲ್ ಪಬ್ಲಿಕ್ ಸ್ಕೂಲ್, ಕಲ್ಕೆರೆ ಅಗ್ರ ಮುಖ್ಯ ರಸ್ತೆ, ಬೆಂಗಳೂರು

ಬೆಂಗಳೂರು ಕೇಂದ್ರ ನಗರ ಪಾಲಿಕೆ:

  1. ಸಿ.ವಿ.ರಾಮನ್ ನಗರ: ಸಿ.ವಿ.ರಾಮನ್ ನಗರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, 9ನೇ ಎ ಮುಖ್ಯ ರಸ್ತೆ, ಐIಅ ಕಾಲೋನಿ, ಊಂಐ 3ನೇ ಹಂತ, ಸೆಕ್ಟರ್ 4, ಜೀವನ್ ಭೀಮಾ ನಗರ.
  2. ಜೀವನ್ ಭೀಮಾ ನಗರ: ಜೀವನ್ ಭೀಮಾ ನಗರ, ತಮಿಳು ಸರ್ಕಾರಿ ಶಾಲೆ.
  3. ಶಾಂತಿನಗರ: ಶಾಂತಿನಗರ ಸರ್ಕಾರಿ ಮಾದರಿ ಪ್ರಾಥಮಿಕ ತಮಿಳು ಬಾಲಕಿಯರ ಶಾಲೆ, ಶಾಂತಿನಗರ ಮುಖ್ಯ ರಸ್ತೆ, ಲಾಂಗ್ಫೋರ್ಡ್ ಟೌನ್.
  4. ದೊಮ್ಮಲೂರು: ಡಾ. ಶ್ರೀ. ಶ್ರೀ. ಶ್ರೀ. ಶಿವಕುಮಾರ ಸ್ವಾಮೀಜಿ ಬಯಲು ರಂಗಮಂಟಪ, 1ನೇ ಮಹಡಿ, ಇಂಡಿಕ್ಯೂಬ್ ಪಾರ್ಕ್, ಊಂಐ ಹಳೆ ವಿಮಾನ ನಿಲ್ದಾಣ ರಸ್ತೆ, ದೋಮ್ಲೂರು 1ನೇ ಹಂತ.
  5. ಗಾಂಧಿನಗರ: ಗುಂಡೂರಾವ್ ಮೈದಾನ, ಸಿರೂರ್ ಪಾರ್ಕ್ ರಸ್ತೆ, ಮಲ್ಲೇಶ್ವರಂ.
  6. ಚಿಕ್ಕಪೇಟೆ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, 1ನೇ ಕ್ರಾಸ್, ಮಾಗಡಿ ಮುಖ್ಯ ರಸ್ತೆ, ಆರೋಗ್ಯ ಸೌಧ ಸಮೀಪ.
  7. ಕೆಂಪೇಗೌಡ ನಗರ: ನ್ಯಾಷನಲ್ ಹೈ ಸ್ಕೂಲ್, ಕೆ.ಆರ್ ರಸ್ತೆ, ಬಸವನಗುಡಿ.
  8. ಹೊಂಬೇಗೌಡನಗರ: ರಾಣಿ ಸರಳಾ ದೇವಿ ವಿದ್ಯಾ ಸಂಸ್ಥೆ, ನಂ.281, 7ನೇ ಕ್ರಾಸ್ ರಸ್ತೆ, 1ನೇ ಬ್ಲಾಕ್, ಜಯನಗರ.
  9. ಶಿವಾಜಿನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಹಿಂಭಾಗ.
  10. ವಸಂತನಗರ: ಸರ್ದಾರ್ ಪಟೇಲ್ ಭವನ, ನಂ.16, ತಿಮ್ಮಯ್ಯ ರಸ್ತೆ, ಕ್ವೀನ್ಸ್ ರಸ್ತೆ.
  11. ಚಾಮರಾಜಪೇಟೆ: ಪಾಲಿಕೆ ಪಿಯು ಕಾಲೇಜು, 2ನೇ ಮುಖ್ಯ ರಸ್ತೆ, 6ನೇ ಕ್ರಾಸ್.
  12. ಜೆ.ಜೆ.ಆರ್ ನಗರ: ಪಾಲಿಕೆ ಬಾಲಕಿಯರ ಪಿಯು ಕಾಲೇಜು, ಪಾದರಾಯನಪುರ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ:

  1. ಮಲ್ಲೇಶ್ವರಂ ಮತ್ತು ಮತ್ತಿಕೆರೆ: ಮಲ್ಲೇಶ್ವರಂ ವಿಭಾಗ ಕಂದಾಯಾಧಿಕಾರಿಗಳ ಕಚೇರಿ ಸಭಾಂಗಣ, ಪಾಲಿಕೆ ಕಟ್ಟಡ, 5ನೇ ಮುಖ್ಯ ರಸ್ತೆ, 5ನೇ ಕ್ರಾಸ್ ರಸ್ತೆ, ಎಂ.ಕೆ.ಕೆ ರಸ್ತೆ.
  2. ರಾಜಾಜಿನಗರ ಮತ್ತು ಶ್ರೀರಾಮಮಂದಿರ: ರಾಜಾಜಿನಗರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 1ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಸಂಕೀರ್ಣ, 2ನೇ ಬ್ಲಾಕ್.
  3. ಬಸವನಗುಡಿ ಮತ್ತು ಗಿರಿನಗರ: ಬಸವನಗುಡಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, #19, ನೆಲ ಮಹಡಿ, ತ್ಯಾಗರಾಜನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು(ಸಿಟಿ ಬೆಡ್ ಪ್ರದೇಶ).
  4. ಗೋವಿಂದರಾಜನಗರ ಮತ್ತು ಚಂದ್ರ ಲೇಔಟ್: ಜ್ಞಾನಸೌಧ, 3ನೇ ಮುಖ್ಯರಸ್ತೆ, ಕಲ್ಯಾಣನಗರ, 8ನೇ ಕ್ರಾಸ್, 1ನೇ ಹಂತ, 2ನೇ ಬ್ಲಾಕ್, ನಾಗರಭಾವಿ, ಮೂಡಲಪಾಳ್ಯ.
  5. ವಿಜಯನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ: ಪಾಲಿಕೆ ವಾರ್ಡ್ ಕಚೇರಿ, ಹಂಪಿನಗರ, ಶಾಸಕರ ಕಚೇರಿ, ಸಂಕಷ್ಟಹರ ಗಣಪತಿ ದೇವಸ್ಥಾನ ಸಮೀಪ, ಹಂಪಿನಗರ, ಆರ್‌ಪಿಸಿ ಲೇಔಟ್.
  6. ಪದ್ಮನಾಭನಗರ ಮತ್ತು ಬನಶಂಕರಿ: ಪದ್ಮನಾಭನಗರ ಶಾಸಕರ ಕಚೇರಿ, ಸಂಖ್ಯೆ 3, 9ನೇ ಮುಖ್ಯರಸ್ತೆ, ವಿಹಾರ ಕೇಂದ್ರ ಸಮೀಪ, ಸಿದ್ದಣ್ಣ ಲೇಔಟ್, ಬನಶಂಕರಿ 2ನೇ ಹಂತ.
  7. ಆರ್.ಆರ್.ನಗರ, ಲಗ್ಗೆರೆ ಮತ್ತು ಲಕ್ಷ್ಮೀದೇವಿನಗರ: ಗಂಗಮ್ಮ ತಿಮ್ಮಯ್ಯ ಶಿಕ್ಷಣ ಸಂಸ್ಥೆ, ಸುಂಕದಕಟ್ಟೆ, 10/15, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಪೋಸ್ಟ್.
  8. ಕೆಂಗೇರಿ ಮತ್ತು ಹೇರೋಹಳ್ಳಿ: ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್, ಕೊಮ್ಮಘಟ್ಟ ರಸ್ತೆ, 18, 3ನೇ ಮುಖ್ಯರಸ್ತೆ, ಅಂಚೆ ಕಚೇರಿ ಹಿಂಭಾಗ, ಕೆಂಗೇರಿ ಸ್ಯಾಟಲೈಟ್ ಟೌನ್.
  9. ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ಹೆಗ್ಗನಹಳ್ಳಿ: ಹೆಗ್ಗನಹಳ್ಳಿ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, 4ನೇ ಕ್ರಾಸ್, ಎಚ್‌ಎಂಟಿ ಲೇಔಟ್, ಓಂ ಟಿಂಬರ್ಸ್ ರಸ್ತೆ, ನೀರಿನ ಟ್ಯಾಂಕ್ ಸಮೀಪ, ನಾಗಸಂದ್ರ ಪೋಸ್ಟ್.
  10. ಮಹಾಲಕ್ಷ್ಮೀ ಲೇಔಟ್ ಮತ್ತು ನಾಗಪುರ: ಮಹಾಲಕ್ಷ್ಮೀಪುರ ವಿಭಾಗದ ಕಂದಾಯ ಅಧಿಕಾರಿಗಳ ಕಚೇರಿ, ಪಾಲಿಕೆ ಸಂಕೀರ್ಣ, ಸಂಖ್ಯೆ 1221, 12ನೇ ಮುಖ್ಯರಸ್ತೆ, 11ನೇ ಕ್ರಾಸ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, 2ನೇ ಹಂತ, ನಾಗಪುರ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ:

  1. ಅಂಜನಾಪುರ: ಬುದ್ಧ ಭವನ, ಜೆಪಿ ನಗರ 8ನೇ ಹಂತ, ರಾಘವ ನಗರ, ಐಎಂಜಿ ಅಪಾರ್ಟ್ಮೆಂಟ್ಸ್ ಸಮೀಪ.
  2. ಬೇಗೂರು: ವಿದ್ಯಾ ವಿಕಾಸ್ ಸರ್ಕಾರಿ ಪ್ರೌಢಶಾಲೆ, ವಿಶ್ವಪ್ರಿಯಾ ನಗರ, ಬೇಗೂರು.
  3. ಜಯನಗರ: ಬಹುಉದ್ದೇಶ ಕಾರ್ಪೊರೇಷನ್ ಕಟ್ಟಡ, 2ನೇ ಕ್ರಾಸ್ ರಸ್ತೆ, ಸಿಎಚ್‌ಸಿಎಸ್ ಲೇಔಟ್, ಎಲ್‌ಐಸಿ ಕಾಲೋನಿ, ಜಯನಗರ 4ನೇ ಬ್ಲಾಕ್, ಜಯನಗರ.
  4. ಜೆಪಿ ನಗರ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, 21ನೇ ಮುಖ್ಯರಸ್ತೆ, ಮಾರೆನಹಳ್ಳಿ, ರೇಣುಕಾ ಪ್ರಸನ್ನ ಥಿಯೇಟರ್ ಎದುರು, 2ನೇ ಹಂತ, ಜೆಪಿ ನಗರ.
  5. ಉತ್ತರಹಳ್ಳಿ: ಕರ್ನಾಟಕ ಪಬ್ಲಿಕ್ ಸ್ಕೂಲ್, ಉತ್ತರಹಳ್ಳಿ ಬಸ್ ನಿಲ್ದಾಣದ ಹಿಂಭಾಗ, ಉತ್ತರಹಳ್ಳಿ.
  6. ಯಲಚೇನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚುಂಚಘಟ್ಟ, 14ನೇ ಮುಖ್ಯರಸ್ತೆ, ಆರ್‌ಬಿಐ ಲೇಔಟ್, ಜೆಪಿ ನಗರ 7ನೇ ಹಂತ.
  7. ಪದ್ಮನಾಭನಗರ: ಎಆರ್‌ಒ ಕಚೇರಿ, ಸಿಜೆ ವೆಂಕಟದಾಸ್ ರಸ್ತೆ, 15 ಬಸ್ ನಿಲ್ದಾಣದ ಸಮೀಪ, ಲಕ್ಷ್ಮೀಕಾಂತ ಪಾರ್ಕ್ ಎದುರು.
  8. ಬೊಮ್ಮನಹಳ್ಳಿ: ಶ್ರೀ ಸದ್ಗುರು ಸಾಯಿಬಾಬಾ ಕನ್ನಡ ಪ್ರಾಥಮಿಕ ಶಾಲೆ, ರೂಪೇನ ಅಗ್ರಹಾರ, ಪೊಲೀಸ್ ಠಾಣೆ ಸಮೀಪ.
  9. ಅರಕೆರೆ: ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪುಟ್ಟೇನಹಳ್ಳಿ, ಜಂಬೂಸವಾರಿ ದಿನ್ನೆ ಮುಖ್ಯರಸ್ತೆ.
  10. ಎಚ್‌ಎಸ್‌ಆರ್ ಲೇಔಟ್: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸೆಕ್ಟರ್-1.
  11. ಕೋರಮಂಗಲ: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸಿಇಆರ್‌ಪಿ ಪೊಲೀಸ್ ಕ್ವಾರ್ಟರ್ಸ್, ಅಡುಗೋಡಿ.
  12. ಬಿಟಿಎಂ ಲೇಔಟ್: ಶ್ರೀ ಸಾಯಿ ಇಂಗ್ಲಿಷ್ ಶಾಲೆ, 2ನೇ ಮುಖ್ಯರಸ್ತೆ, ನ್ಯೂ ಮೈಕೊ ಲೇಔಟ್ ರಸ್ತೆ, ಅಡುಗೋಡಿ ಸಿಗ್ನಲ್ ಸಮೀಪ.

ಬೆಂಗಳೂರು ಉತ್ತರ ನಗರ ಪಾಲಿಕೆ:

  1. ಕೊಡಿಗೆಹಳ್ಳಿ: ಸರ್ಕಾರಿ ಪ್ರಾಥಮಿಕ ಶಾಲೆ, ಅಮೃತಹಳ್ಳಿ ಮುಖ್ಯರಸ್ತೆ, ಬ್ಯಾಟರಾಯನಪುರ.
  2. ವಿದ್ಯಾರಣ್ಯಪುರ: ಬಿಬಿಎಂಪಿ ಸಮುದಾಯಭವನ ಕಟ್ಟಡ, ಎಚ್‌ಎಂಟಿ ಲೇಔಟ್, 1ನೇ ಬ್ಲಾಕ್, 2ನೇ ಕ್ರಾಸ್, ಎನ್‌ಟಿಐ ಮೈದಾನದ ಎದುರು, ಹಾಪ್‌ಕಾಮ್ಸ್ ರಸ್ತೆ, ವಿದ್ಯಾರಣ್ಯಪುರ.
  3. ಪುಲಿಕೇಶಿನಗರ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಫ್ರೆಜರ್ ಟೌನ್.
  4. ಕೆ.ಜಿ. ಹಳ್ಳಿ: ಬಿಬಿಎಂಪಿ ಬಾಲಕಿಯರ ಪ್ರೌಢಶಾಲೆ, ರಾಬರ್ಟ್ಸನ್ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಫ್ರೆಜರ್ ಟೌನ್.
  5. ಮಾರುತಿಸೇವಾನಗರ: ಸೀತಾರಾಮ ಕಲ್ಯಾಣ ಮಂಟಪ, ಬಾಣಸವಾಡಿ ಮುಖ್ಯರಸ್ತೆ.
  6. ಎಚ್.ಬಿ.ಆರ್. ಲೇಔಟ್: ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಾಥಮಿಕ ಶಾಲೆ, ಎಚ್‌ಬಿಆರ್ ಲೇಔಟ್, 7ನೇ ಮುಖ್ಯರಸ್ತೆ.
  7. ದಾಸರಹಳ್ಳಿ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ಟೆನ್ಷನ್, ಹೆಸರಘಟ್ಟ ರಸ್ತೆ.
  8. ಯಶವಂತಪುರ: ಸೌಂದರ್ಯ ಶಾಲೆ, ಕಾಂಪೋಸಿಟ್ ಪ್ರೀ-ಯೂನಿವರ್ಸಿಟಿ ಕಾಲೇಜು, ಹವನೂರು ಎಕ್ಸ್ಟೆನ್ಷನ್, ಹೆಸರಘಟ್ಟ ರಸ್ತೆ.
  9. ಶೆಟ್ಟಿಹಳ್ಳಿ : ಆರ್‌ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಚಿಕ್ಕಬಾಣಾವರ ರೈಲು ನಿಲ್ದಾಣ ರಸ್ತೆ, ಬ್ಯಾಂಕ್ ಆಫ್ ಬರೋಡಾ ಎಟಿಎಂ ಸಮೀಪ, ಮೇಡರಹಳ್ಳಿ.
  10. ಹೆಬ್ಬಾಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ಬಾಳ.
  11. ಜೆ.ಸಿ.ನಗರ: ಫ್ಲಾರೆನ್ಸ್ ಪಬ್ಲಿಕ್ ಸ್ಕೂಲ್, ಆರ್.ಟಿ.ನಗರ.
  12. ಯಲಹಂಕ ನ್ಯೂ ಟೌನ್ / ಯಲಹಂಕ ಓಲ್ಡ್ ಟೌನ್ ಮಿನಿ ವಿಧಾನಸೌಧ, 3ನೇ ಮಹಡಿ, ಎನ್‌ಇಎಸ್ ಸಮೀಪ, ಸುಗ್ಗಪ್ಪ ಲೇಔಟ್, ಯಲಹಂಕ, ಬೆಂಗಳೂರು – 560064

Share

You cannot copy content of this page