ಸಮಗ್ರ ಸುದ್ದಿ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR): ಚುನಾವಣೆ ಕೆಲಸ ಕಾರ್ಯಗಳ ಪ್ರಕ್ರಿಯೆ ತ್ವರಿತಗತಿಯಲ್ಲಿ ನಿರ್ವಹಿಸಲು ಡಾ: ರಾಜೇಂದ್ರ ಕೆ. ವಿ. ಸೂಚನೆ

Share

ಬೆಂಗಳೂರು: ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision-SIR) ಹಾಗೂ ಚುನಾವಣೆ ಕೆಲಸಗಳಿಗೆ ಸಂಬಂಧಿಸಿದಂತೆ ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ. ರವರು ಮೇ 18ರಂದು ಮಲ್ಲೇಶ್ವರಂನ ಜಲಮಂಡಳಿಯ ಸುವರ್ಣ ಭವನದಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ, ಪ್ರಸ್ತುತ ಎಸ್. ಐ.ಆರ್ ಹಂತ-III ರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿರುವ ಹಿನ್ನೆಲೆಯಲ್ಲಿ ಪೂರ್ಣ ಸಿದ್ಧತೆಯೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚಿಸಿದರು.

ಜನಗಣತಿ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿದುದಕ್ಕಾಗಿ ಅಧಿಕಾರಿಗಳನ್ನು ಅಭಿನಂದಿಸಿದ ಆಯುಕ್ತರು, ಎಸ್.ಐ.ಆರ್ ಹಂತ-III ರ ಕೆಲಸ, ಸಿದ್ಧತೆಗಳು 2026 ಜೂನ್ 20ಕ್ಕೆ ಆರಂಭವಾಗಲಿದೆ, ಜೊತೆಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ನಗರ ಪಾಲಿಕೆಗಳ ಚುನಾವಣೆಯೂ ನಡೆಯಲಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಸಂಪೂರ್ಣ ಸಿದ್ಧತೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು ಎಂದು ಆಯುಕ್ತರು ಹೇಳಿದರು.

ಸಭೆಯಲ್ಲಿ ಆಯುಕ್ತರು ನೀಡಿದ ಪ್ರಮುಖ ನಿರ್ದೇಶನಗಳು:*

ಮತದಾರರ ನೋಂದಣಾಧಿಕಾರಿಗಳು (ERO) ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳು (AERO) ಮತಗಟ್ಟೆ ಅಧಿಕಾರಿ (ಬಿ ಎಲ್ ಒ)ಗಳೊಂದಿಗೆ ತಮ್ಮ ತಮ್ಮ ವ್ಯಾಪ್ತಿಯ ಎಲ್ಲ ಮತಗಟ್ಟೆ (ಪೋಲಿಂಗ್ ಸ್ಟೇಷನ್)ಗಳಿಗೆ ಮುಂಚಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು.

ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರುಗಳು (ಬಿ ಎಲ್‌ ಒ ಸೂಪರ್ವೈಸರ್) ಬಿ ಎಲ್‌ ಒ ಗಳನ್ನು ಸೂಕ್ತ ರೀತಿಯಲ್ಲಿ ಕೆಲಸಕ್ಕೆ ನಿಯೋಜಿಸಬೇಕು. ಅಗತ್ಯವಿದ್ದಲ್ಲಿ ತರಬೇತಿ ನೀಡಬೇಕು.

ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ಬಳಿ ಎಸ್ ಐ ಆರ್ ಪ್ರಕ್ರಿಯೆಗೆ ತಮ್ಮಲ್ಲಿ ಲಭ್ಯವಿರುವ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ಆಯುಕ್ತರು, ಸಿಬ್ಬಂದಿ ನಿಯೋಜನೆ ಸಮರ್ಪಕವಾಗಿ ಇರುವಂತೆ ಖಚಿತಪಡಿಸಿಕೊಳ್ಳಲು ಸೂಚಿಸಿದರು.

ಮತಗಟ್ಟೆ ಮೇಲ್ವಿಚಾರಕರು (ಸೂಪರ್ವೈಸರ್ ಗಳು) ಬಿ.ಎಲ್.ಒ ಗಳ ಜತೆ ಸಂಪರ್ಕದಲ್ಲಿರಬೇಕು. ಆ ಮೂಲಕ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು.

ಕಂದಾಯ ಅಧಿಕಾರಿಗಳು ಖಾತೆ ಕೆಲಸಗಳ ಜೊತೆಗೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಎಸ್ ಐ ಆರ್ ಗೆ ಸಮರ್ಪಕ ರೀತಿಯಲ್ಲಿ ಸಮಯ ಮೀಸಲಿಡಿ. ಖಾತಾ ಮೇಳದ ಕಡೆಗೂ ಗಮನ ಹರಿಸಬೇಕು.

ಚುನಾವಣೆ ಕೆಲಸಗಳು ಯಾವುದೇ ಲೋಪದೋಷಗಳು ಆಗದ ಹಾಗೇ ಎಸ್.ಐ.ಆರ್ ಪ್ರಕ್ರಿಯೆ ಕೈಗೊಳ್ಳಬೇಕು. ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡ ಪ್ರಕಾರ ಮತದಾರರ ಪಟ್ಟಿ ನಿರ್ವಹಣೆಯಾಗಬೇಕು.

ಸಭೆಯಲ್ಲಿ ಅಪರ ಆಯುಕ್ತರು (ಕಂದಾಯ- ಪ್ರ.) ಸಂಗಪ್ಪ, ಜಂಟಿ ಆಯುಕ್ತರು ಆರತಿ ಆನಂದ್, ಉಪ ಆಯುಕ್ತರು ಶಂಕರೆಪ್ಪ ವಣಿಕ್ಯಾಳ, ಮಂಜುನಾಥ ಸ್ವಾಮಿ, ಸಹಾಯಕ ಆಯುಕ್ತರು ರಾಮದಾಸ್, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕರುಗಳು (ಬಿಎಲ್‌ಓ ಸೂಪರ್ವೈಸರ್) ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.


Share

You cannot copy content of this page