ಸಮಗ್ರ ಸುದ್ದಿ

ಗಡ್ಡೆ ಗೆಣಸು ಬೆಳೆಗಳ ಸಂಶೋಧನೆ: ಬೆಂಗಳೂರಿನಲ್ಲಿ ನಾಳೆಯಿಂದ 26ನೇ ವಾರ್ಷಿಕ ಸಾಮಾನ್ಯ ಸಭೆ

Share

ಬೆಂಗಳೂರು:ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ (ಗಡ್ಡೆ ಗೆಣಸು ಬೆಳೆಗಳು) ಇವರ ಜಂಟಿ ಆಶ್ರಯದಲ್ಲಿ 26ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಮೇ 21 ರಿಂದ 23 ರವರೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ವಿಷ್ಣುವರ್ಧನ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ನವದೆಹಲಿಯ ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನ ಉಪ ಮಹಾನಿರ್ದೇಶಕರು (ತೋಟಗಾರಿಕೆ ವಿಜ್ಞಾನ) ಆದ ಡಾ. ಸಂಜಯ್ ಕುಮಾರ್ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಬಾಗಲಕೋಟೆ ತೋ.ವಿ.ವಿ. ಸಂಶೋಧನಾ ನಿರ್ದೇಶಕರಾದ ಡಾ. ಬಿ. ಫಕ್ರುದ್ದೀನ್, ಬೆಂಗಳೂರಿನ ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ –ATARI ಯ ನಿರ್ದೇಶಕರಾದ ಡಾ. ಎಂ. ಪ್ರಭಾಕರ್, ಐಸಿಎಆರ್ FVS&MP ಸಹಾಯಕ ಮಹಾನಿರ್ದೇಶಕರಾದ ಡಾ. ಸುಧಾಕರ್ ಪಾಂಡೆ ಹಾಗೂ ಬೆಂಗಳೂರಿನ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ -ಐಐಎಚ್‍ಆರ್ ನಿರ್ದೇಶಕರಾದ ಡಾ. ಟಿ. ಕೆ. ಬೆಹೆರಾ ಉಪಸ್ಥಿತರಿರಲಿದ್ದಾರೆ.

ಚರ್ಚೆಯ ಪ್ರಮುಖ ವಿಷಯಗಳು ಮೂರು ದಿನಗಳ ಕಾಲ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ಭಾರತದ ವಿವಿಧ ಕೃಷಿ-ಹವಾಮಾನ ವಲಯಗಳಿಗೆ ಸೂಕ್ತವಾದ ಗಡ್ಡೆ ಗೆಣಸು ಬೆಳೆಗಳ ಬಗ್ಗೆ ವ್ಯಾಪಕ ಸಮಾಲೋಚನೆ ನಡೆಯಲಿದೆ.

ಪ್ರಮುಖವಾಗಿ ಗಡ್ಡೆ ಗೆಣಸು ಬೆಳೆಗಳ ತಂತ್ರಜ್ಞಾನ ಮತ್ತು ಮೌಲ್ಯವರ್ಧನೆ, ತಳಿಯ ಸಂಪನ್ಮೂಲಗಳು ಹಾಗೂ ತಳಿ ಅಭಿವೃದ್ಧಿ, ಸುಧಾರಿತ ಬೆಳೆ ನಿರ್ವಹಣಾ ಪದ್ಧತಿಗಳು, 60ಕ್ಕೂ ಹೆಚ್ಚು ವಿಜ್ಞಾನಿಗಳು ಭಾಗಿದೇಶದ ವಿವಿಧ ಭಾಗಗಳಲ್ಲಿರುವ ಎಐಸಿಆರ್‍ಪಿ ಕೇಂದ್ರಗಳಿಂದ ಸುಮಾರು 60 ವಿಜ್ಞಾನಿಗಳು ಈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ತಮ್ಮ ಸಂಶೋಧನೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದರೊಂದಿಗೆ, ಕರ್ನಾಟಕದ ಗಡ್ಡೆ ಗೆಣಸು ಬೆಳೆಗಾರ ರೈತರಿಗೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ಆಹ್ವಾನ ನೀಡಲಾಗಿದೆ ಎಂದು ಡೀನ್ ಡಾ.ರಾಮಚಂದ್ರ ನಾಯ್ಕ ಅವರು ತಿಳಿಸಿದ್ದಾರೆ.


Share

You cannot copy content of this page