ಸಮಗ್ರ ಸುದ್ದಿ

ಮಳೆಗಾಲ ಹಿನ್ನೆಲೆ ಕೇಂದ್ರ ನಗರ ಪಾಲಿಕೆಯ ಎಲ್ಲಾ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ: ರಾಜೇಂದ್ರ ಚೋಳನ್

Share

ಬೆಂಗಳೂರು:ಮಳೆಗಾಲದಲ್ಲಿ ಉಂಟಾಗುವ ಪ್ರವಾಹ, ರಸ್ತೆ ಅಕ್ಕ-ಪಕ್ಕದಲ್ಲಿನ ಚರಂಡಿಗಳಲ್ಲಿ ತ್ಯಾಜ್ಯ ಶೇಖರಣೆಯಾಗಿ ಬ್ಲಾಕ್ ಆಗುವುದನ್ನು ತಡೆಯಲು, ನಿಂತ ನೀರನ್ನು ಪಂಪ್ ಸೆಟ್ ಮೂಲಕ ತೆರವುಗೊಳಿಸಲು, ಬಿದ್ದ ಮರ, ರೆಂಬೆ ಕೊಂಬೆ ತೆರವು, ಇನ್ನಿತರ ಸಮಸ್ಯೆಗಳು ತಲೆದೋರಿದಲ್ಲಿ ಅವುಗಳನ್ನು ಕೂಡಲೇ ಪರಿಹರಿಸಲು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಎಲ್ಲಾ ಇಂಜಿನೀಯರಿಂಗ್ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

ಅಗತ್ಯ ಸಿಬ್ಬಂದಿಗಳು, ವಾಹನ, ಅಗತ್ಯ ಸಲಕರಣೆಗಳೊಂದಿಗೆ ಮಳೆಗಾಲ ಎದುರಿಸಲು ಕೇಂದ್ರ ನಗರ ಪಾಲಿಕೆಯಲ್ಲಿ *ಎಲ್ಲಾ ವಿಭಾಗ ಹಾಗೂ ಉಪ ವಿಭಾಗಗಳಲ್ಲಿ ನಿಯಂತ್ರಣ ಕೊಠಡಿಗಳೊಂದಿಗೆ ತಂಡಗಳು ಸಿದ್ದವಾಗಿವೆ ಎಂದು ಅವರು ಹೇಳಿದ್ದಾರೆ.


Share

You cannot copy content of this page