ಸಮಗ್ರ ಸುದ್ದಿ

ಕರ್ನಾಟಕ ಸಚಿವ ಸಂಪುಟ ಪುನಾರಚನೆ: ನೂತನ ಖಾತೆಗಳ ಹಂಚಿಕೆ

Share

​ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಯಾಗಿದ್ದು, ನೂತನವಾಗಿ ಖಾತೆಗಳನ್ನು ಹಂಚಿಕೆ ಮಾಡಿ ರಾಜ್ಯಪತ್ರದ ವಿಶೇಷ ಸಂಚಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಾರತದ ಸಂವಿಧಾನದ 166ನೇ ಅನುಚ್ಛೇದದ ಕ್ಲಾಸ್ (3) ಹಾಗೂ 1977ರ ಕರ್ನಾಟಕ ಸರ್ಕಾರದ (ವ್ಯವಹಾರಗಳ ನಿರ್ವಹಣೆ) ನಿಯಮ 5 ರ ಅನ್ವಯ, ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವರಿಗೆ ಹೊಸ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ಪ್ರಮುಖ ಖಾತೆಗಳ ವಿವರ:

ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ): ಹಣಕಾಸು, ಸಚಿವ ಸಂಪುಟ ವ್ಯವಹಾರಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR), ಗುಪ್ತಚರ ಇಲಾಖೆ ಹಾಗೂ ಇತರ ಯಾವುದೇ ಸಚಿವರಿಗೆ ಹಂಚಿಕೆಯಾಗದ ಉಳಿದ ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

​ಡಾ. ಜಿ. ಪರಮೇಶ್ವರ್ (ಉಪ ಮುಖ್ಯಮಂತ್ರಿ): ಇವರಿಗೆ ಕಂದಾಯ ಮತ್ತು ಕ್ರೀಡಾ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಕೆ.ಎಚ್. ಮುನಿಯಪ್ಪ (ಸಂಪುಟ ಸಚಿವರು): ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ. ಕೆ.ಜೆ. ಜಾರ್ಜ್ (ಸಂಪುಟ ಸಚಿವರು): ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ. ಎಂ.ಬಿ. ಪಾಟೀಲ್ (ಸಂಪುಟ ಸಚಿವರು): ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ. ರಾಮಲಿಂಗಾರೆಡ್ಡಿ (ಸಂಪುಟ ಸಚಿವರು): ಬೃಹತ್ ಮತ್ತು ಮಧ್ಯಮ ನೀರಾವರಿ ಇಲಾಖೆ. ಸತೀಶ್ ಜಾರಕಿಹೊಳಿ (ಸಂಪುಟ ಸಚಿವರು): ಲೋಕೋಪಯೋಗಿ ಇಲಾಖೆ (PWD). ಕೃಷ್ಣ ಬೈರೇಗೌಡ (ಸಂಪುಟ ಸಚಿವರು): ಬೆಂಗಳೂರು ನಗರಾಭಿವೃದ್ಧಿ (ಬೆಂಗಳೂರು ಮಹಾನಗರ ಪಾಲಿಕೆಯ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ವಲಯಗಳು ಸೇರಿದಂತೆ), ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ಮತ್ತು ಬಿಎಂಆರ್‌ಸಿಎಲ್ (BMRCL) ಜವಾಬ್ದಾರಿಯನ್ನು ಹೊರಿಸಲಾಗಿದೆ.

​ ಪ್ರಿಯಾಂಕ್ ಖರ್ಗೆ (ಸಂಪುಟ ಸಚಿವರು): ಗೃಹ ಇಲಾಖೆ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ ಹಾಗೂ ಇ-ಆಡಳಿತ ಇಲಾಖೆ.ಯು.ಟಿ. ಖಾದರ್ (ಸಂಪುಟ ಸಚಿವರು): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಈಶ್ವರ್ ಖಂಡ್ರೆ (ಸಂಪುಟ ಸಚಿವರು): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ. ಡಾ. ಯತೀಂದ್ರ ಸಿದ್ದರಾಮಯ್ಯ (ಸಂಪುಟ ಸಚಿವರು): ನಗರಾಭಿವೃದ್ಧಿ ಇಲಾಖೆ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, KUIDFC, ಬಿಡಿಎ, ಬಿಎಂಆರ್‌ಡಿಎ, ಜಿಬಿಎ ಹೊರತುಪಡಿಸಿ ಉಳಿದ ನಗರಾಭಿವೃದ್ಧಿ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರಗಳು).
​ಶ್ರೀ ಬೈರತಿ ಸುರೇಶ್ (ಸಂಪುಟ ಸಚಿವರು): ಸಾರಿಗೆ ಇಲಾಖೆ.
​ಶ್ರೀ ಶರಣಪ್ರಕಾಶ್ ಪಾಟೀಲ್ (ಸಂಪುಟ ಸಚಿವರು): ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಜವಾಬ್ದಾರಿ ನೀಡಲಾಗಿದೆ.

​ರಾಜ್ಯಪಾಲರ ಆದೇಶದ ಮೇರೆಗೆ ಸರ್ಕಾರದ ಅಧೀನ ಕಾರ್ಯದರ್ಶಿ-2 (ರಾಜ್ಯ ಶಿಷ್ಟಾಚಾರ) ಬಾಣದರಂಗಯ್ಯ ಎನ್.ಆರ್. ಅವರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ. 


Share

You cannot copy content of this page