ಸಮಗ್ರ ಸುದ್ದಿ

ಸೂರ್ಯಗಾಯತ್ರಿ ಸಂಗೀತ ಕಾರ್ಯಾಗಾರ ಮುಕ್ತಾಯ: 45 ಗಾಯನ ಆಸಕ್ತರಿಗೆ ಗಾಯನ ಟಿಪ್ಸ್ | ಪರಮ್ ಕಲ್ಚರ್ ಹಾಗೂ ಹರಿವಂಶ ಗ್ರೂಪ್ ಸಹಯೋಗದ ಅಪೂರ್ವ ಯತ್ನ

Share

​ಬೆಂಗಳೂರು: ರಾಜಧಾನಿಯ ಕಲಾಭಿಮಾನಿಗಳಿಗೆ ಮತ್ತು ಉದಯೋನ್ಮುಖ ಗಾಯಕರಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಪರಮ್ ಕಲ್ಚರ್’ ಸಂಸ್ಥೆಯು ‘ಹರಿವಂಶ ಗ್ರೂಪ್’ ಸಹಯೋಗದೊಂದಿಗೆ ಜಯನಗರದ ಯುವಕ ಸಂಘದಲ್ಲಿ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಒಟ್ಟು 45 ಮಂದಿ ಗಾಯನ ಆಸಕ್ತರು ಭಾಗವಹಿಸಿ, ಅಪೂರ್ವ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.

​ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಸನ್ಸೇಷನ್ ಸೃಷ್ಟಿಸಿರುವ ಖ್ಯಾತ ಯುವ ಶಾಸ್ತ್ರೀಯ ಗಾಯಕಿ, ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತೆ ಸೂರ್ಯಗಾಯತ್ರಿ ಅವರು ಜೂನ್ 12 ಮತ್ತು 13ರಂದು ನಡೆದ ಈ ಕಾರ್ಯಾಗಾರವನ್ನು ಮುನ್ನಡೆಸಿದರು.

​ನೇರ ಕಲಿಕೆಯ ಅಪೂರ್ವ ಅನುಭವ:

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 45 ಆಸಕ್ತರಿಗೆ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಮತ್ತು ಅಭಂಗ್‌ಗಳನ್ನು ಕಲಿಯುವ ಸುವರ್ಣಾವಕಾಶ ಸಿಕ್ಕಿತು. ಒಟ್ಟು 4 ಗಂಟೆಗಳ ಕಾಲ ನಡೆದ ಈ ನೇರ ಕಲಿಕಾ ಸರಣಿಯಲ್ಲಿ, ಗಾಯಕಿ ಸೂರ್ಯಗಾಯತ್ರಿ ಅವರು ತಮ್ಮ ಕಲಾ ಜರ್ನಿ ಮತ್ತು ಭಕ್ತಿ ಸಂಗೀತದ ಅನುಭವಗಳನ್ನು ಹಂಚಿಕೊಂಡರು.

ಭಾಗವಹಿಸಿದ ಎಲ್ಲರಿಗೂ ಕಲಿಕೆಗೆ ಅಗತ್ಯವಿರುವ ವಿಶೇಷ ಸಾಹಿತ್ಯ ಹಾಗೂ ನೋಟ್ಸ್‌ಗಳನ್ನು ವಿತರಿಸಲಾಯಿತು.

ವೇದಿಕೆ ಹಂಚಿಕೊಂಡ ಶಿಬಿರಾರ್ಥಿಗಳು:

ಈ ಕಾರ್ಯಾಗಾರವು ಕೇವಲ ಕಲಿಕೆಗೆ ಸೀಮಿತವಾಗಿರದೆ, ಶಿಬಿರಾರ್ಥಿಗಳಿಗೆ ದೊಡ್ಡ ವೇದಿಕೆಯನ್ನೂ ಕಲ್ಪಿಸಿಕೊಟ್ಟಿತ್ತು. ಕಾರ್ಯಾಗಾರದಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ ಕಲಾಭಿಮಾನಿಗಳಿಗೆ ಜೂನ್ 14ರ ಭಾನುವಾರ ಸಂಜೆ 5 ಗಂಟೆಗೆ ಮೀನಾಕ್ಷಿ ರಂಗಮಂಚದಲ್ಲಿ ನಡೆದ ಭವ್ಯ ಲೈವ್ ಕನ್ಸರ್ಟ್‌ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಬಂಪರ್ ಚಾನ್ಸ್ ಲಭ್ಯವಾಗಿತ್ತು.

​ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಸೂರ್ಯಗಾಯತ್ರಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಾಗಾರವು ಬೆಂಗಳೂರಿನ ಸಂಗೀತ ಆಸಕ್ತರಲ್ಲಿ ಹೊಸ ಉತ್ಸಾಹ ಮೂಡಿಸುವಲ್ಲಿ ಯಶಸ್ವಿಯಾಗಿದೆ.


Share

You cannot copy content of this page