ಸಮಗ್ರ ಸುದ್ದಿ

ರಾಜ್ಯದಲ್ಲಿ  ಎಸ್.ಐ.ಆರ್. ಪ್ರಕ್ರಿಯೆ ಆರಂಭ; ಅಗತ್ಯ ಮಾಹಿತಿ ಒದಗಿಸಲು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮನವಿ

Share

ಬೆಂಗಳೂರು: ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಕಡ್ಡಾಯವಾಗಿ ರಾಜ್ಯದ ನಾಗರೀಕರೆಲ್ಲರೂ ಅಗತ್ಯ ಮಾಹಿತಿ ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ಮನವಿ ಮಾಡಿದ್ದಾರೆ.

ನಾಗರಿಕರು ಈ ಅರ್ಜಿಯನ್ನು ತುಂಬುವಾಗ ಯಾವುದೇ ವಿಷಯವಾಗಿ ಗೊಂದಲಗಳಿದ್ದರೆ, ಪ್ರತಿಯೊಂದು ವಾರ್ಡ್‍ನಲ್ಲೂ ಸ್ಥಾಪಿಸಲಾಗಿರುವ ಸಿಟಿಜನ್ ಸರ್ವೀಸ್ ಸೆಂಟರ್ ಹಾಗೂ ವೋಟರ್ ಫೆಸಿಲಿಟೇಷನ್ ಸೆಂಟರ್ ನಲ್ಲಿ ಮಾಹಿತಿಯನ್ನು ಪಡೆದು ನಿಖರವಾಗಿ ಅರ್ಜಿಯನ್ನು ತುಂಬಬಹುದು.

ಎಸ್.ಐ.ಆರ್. ಅರ್ಜಿಯನ್ನು ತುಂಬಿದರೆ ನಾವು ದೇಶದ ನಾಗರೀಕರಾಗಿದ್ದೇವೆ ಹಾಗೂ ದೇಶದ ಮತದಾರರಾದಂತೆ. ಹಾಗಾಗಿ ರಾಜ್ಯದ ಪ್ರತಿಯೊಬ್ಬ ನಾಗರೀಕರು ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಜಿಯನ್ನು ಸಲ್ಲಿಸುವಂತೆ ಅವರು ಕೋರಿದ್ದಾರೆ.

ನನಗೂ ಬಿ.ಎಲ್.ಒ ಅಧಿಕಾರಿಗಳು ಮೂರು ಅರ್ಜಿಗಳನ್ನು ನೀಡಿದ್ದು, ನಾನೂ ಸಹ ಅರ್ಜಿಯನ್ನು ತುಂಬಿ ಸಲ್ಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.


Share

You cannot copy content of this page