ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ.ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಈ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಹುದ್ದೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.
ಹುದ್ದೆಗಳ ವಿವರ ಹಾಗೂ ಪ್ರಸ್ತುತ ಸ್ಥಿತಿ
ಡಿಟೆಕ್ಟಿವ್ ಸಬ್-ಇನ್ಸ್‌ಪೆಕ್ಟರ್: ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ (ಕೆಕೆ): 05, ಉಳಿದ ಭಾಗ (ಎನ್.ಕೆ.ಕೆ): 15; ಒಟ್ಟು: 2̧0 ಪ್ರಸ್ತುತ ಸ್ಥಿತಿ: ಅಧಿಸೂಚನೆಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೆಇಎ ವತಿಯಿಂದ ಅಧಿಕೃತವಾಗಿ ಪ್ರಕಟಿಸಲಾಗುವುದು.
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್: ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 179; ಉಳಿದ ಭಾಗ: 1421; | ಒಟ್ಟು: 1600; ಪ್ರಸ್ತುತ ಸ್ಥಿತಿ: ಕೆಇಎ ವೆಬ್‌ಸೈಟ್‌ನಲ್ಲಿ ಈಗಾಗಲೇ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 22.06.2026 ರಿಂದ ಆರಂಭಗೊಂಡಿದ್ದು 24.07.2026 ರವರೆಗೆ ಮುಕ್ತವಾಗಲಿದೆ. 06.09.2026ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಪೊಲೀಸ್ ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 596; ಉಳಿದ ಭಾಗ: 3395, ಒಟ್ಟು: 3991; ಪ್ರಸ್ತುತ ಸ್ಥಿತಿ: ಕೆಇಎ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಕೆ ಅವಧಿ 08.06.2026 ರಿಂದ ಆರಂಭಗೊಂಡಿದ್ದು 03.07.2026 ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ 02.08.2026 ರಂದು ಲಿಖಿತ ಪರೀಕ್ಷೆ ನಿಗದಿಗೊಂಡಿದೆ.
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್(CAR): ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ : 334; ಉಳಿದ ಭಾಗ: 1455, ಒಟ್ಟು: 1789; ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (civil): ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 161, ಉಳಿದ ಭಾಗ: 00, ಒಟ್ಟು: 161, ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
ಪೊಲೀಸ್ ಕಾನ್ಸ್ಟೇಬಲ್, ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 364;| ಉಳಿದ ಭಾಗ: 00; ಒಟ್ಟು: 364, ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
ಒಟ್ಟಾರೆ ಹುದ್ದೆಗಳ ಸಂಕ್ಷಿಪ್ತ ಮಾಹಿತಿ:
ಕಲ್ಯಾಣ ಕರ್ನಾಟಕ ಒಟ್ಟು ಹುದ್ದೆಗಳು: 1,639, ಉಳಿದ ಭಾಗಗಳ ಒಟ್ಟು ಹುದ್ದೆಗಳು: 6,286, ಒಟ್ಟು ಒಟ್ಟಾರೆ ಹುದ್ದೆಗಳು: 7,925 ನೇಮಕಾತಿ ನಡೆಯಲಿದೆ.
ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಒಟ್ಟು 1,639 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈಗಾಗಲೇ ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಬೆಕೆಂದು ಸಚಿವರು ರಿದ್ದಾರೆ. ಇಲಾಖೆಯ ಉಳಿದ ಹುದ್ದೆಗಳ ಅಧಿಸೂಚನೆಗಳೂ ಸಹ ಶೀಘ್ರದಲ್ಲೇ ಹೊರಬೀಳಲಿದ್ದು, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
