ಸಮಗ್ರ ಸುದ್ದಿ

ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸೇವೆ ವಿಸ್ತರಣೆ

Share

ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ರೈಲ್ವೆ ಮಂಡಳಿಯು ರೈಲು ಸಂಖ್ಯೆ 07355/07356 ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07355 ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಈ ಮೊದಲು 26.07.2026 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಈಗ ಈ ರೈಲಿನ ಸೇವೆಯನ್ನು 02.08.2026 ರಿಂದ 30.08.2026 ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ, ರೈಲು ಸಂಖ್ಯೆ 07356 ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು, ಈ ಹಿಂದೆ 27.07.2026 ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿತ್ತು. ಈಗ ಈ ರೈಲಿನ ಸೇವೆಯನ್ನು 03.08.2026 ರಿಂದ 31.08.2026 ರವರೆಗೆ ವಿಸ್ತರಿಸಲಾಗಿದೆ.

ಈ ರೈಲುಗಳು ವಿಸ್ತರಿಸಲಾದ ಅವಧಿಯಲ್ಲಿ ಪ್ರಸ್ತುತ ಇರುವ ಸಮಯ, ನಿಲುಗಡೆಗಳು ಮತ್ತು ಬೋಗಿಗಳ ಸಂಯೋಜನೆಯೊಂದಿಗೆ ಹೆಚ್ಚುವರಿಯಾಗಿ 05 ಟ್ರಿಪ್ ಗಳಲ್ಲಿ ಸಂಚರಿಸಲಿವೆ.


Share

You cannot copy content of this page