ಬೆಂಗಳೂರು:ರೈತರ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರ್ಯಾಂಡಿಂಗ್ ವ್ಯವಸ್ಥೆ ರೂಪಿಸಲಾಗಿದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ತಿಳಿಸಿದರು.
ಮಲ್ಲೇಶ್ವರಂನಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘದ ಏಕೀಕೃತ ಬ್ರ್ಯಾಂಡ್ “ರೈತಸಿರಿ”ಯ ಮೊದಲ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಮಾರುಕಟ್ಟೆಗೆ ತಾವು ಬೆಳೆದಂತಹ ಪದಾರ್ಥಗಳನ್ನು ತರಬೇಕಾದರೆ ಮಧ್ಯವರ್ತಿಗಳು ಅದರ ಲಾಭ ಪಡೆಯುತ್ತಿದ್ದರು. ಆದರೆ ಈಗ ರೈತರೇ ಎಫ್‍ಪಿಓ ಸ್ಥಾಪನೆ ಮಡಿಕೊಂಡು, ನೇರವಾಗಿ ಗ್ರಾಹಕರನ್ನು ತಲುಪುವಂತಹ ನೂತನ ವ್ಯವಸ್ಥೆಯನ್ನು ಅವರೇ ಕಂಡುಕೊಂಡು ಸಹಕಾರ ತತ್ವದ ಅಡಿಯಲ್ಲಿ ಮಾಡುತ್ತಿರುವ ಈ ವಿನೂತನವಾದ ಒಂದು ಪ್ರಯತ್ನದಿಂದ ರೈತರಿಗೆ ಲಾಭ ಸಿಗುತ್ತಿದೆ ಎಂದರು.
ರಾಜ್ಯ ಸರ್ಕಾರ 2023-24ರ ಆಯವ್ಯಯದಲ್ಲಿ ರೂ.10 ಕೋಟಿ ಘೋಷಿಸಿತ್ತು. ಅದರಂತೆ ಫೆಬ್ರವರಿ 2024ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಡಿ ಸಂಘ ನೋಂದಣಿಯಾಯಿತು. ನಂತರ “ರೈತಸಿರಿ” ಬ್ರ್ಯಾಂಡ್ ಅನುಮೋದನೆಗೊಂಡ ನಂತರ raithasiri.co.in ಜಾಲತಾಣ ಆರಂಭವಾಯಿತು. ರೈತ ಉತ್ಪಾದಕರ ಸಂಸ್ಥೆಗಳ ಉತ್ಕøಷ್ಟತಾ ಕೇಂದ್ರವು ಸಂಘಕ್ಕೆ ಸಲಹಾ ಸಂಸ್ಥೆಯಾಗಿ ಮಾರ್ಗದರ್ಶನ ನೀಡುತ್ತಿದೆ ಎಂದರು.
ರೈತರದೇ ಸಂಸ್ಥೆ ಪ್ರಸ್ತುತ ಸಂಘದಲ್ಲಿ 162 ರೈತ ಉತ್ಪಾದಕ ಸಂಸ್ಥೆಗಳು ಸದಸ್ಯರಾಗಿದ್ದು, ಇವುಗಳ ಮೂಲಕ 52,000 ಕ್ಕೂ ಹೆಚ್ಚು ರೈತ μÉೀರುದಾರರು ಸಂಘದ ಭಾಗವಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ರೈತ ಉತ್ಪಾದಕರ ಸಂಸ್ಥೆಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುವುದು. ಸಂಘವು ರೈತ ಉತ್ಪಾದಕರ ಸಂಸ್ಥೆಗಳ ಸಂಘಟಿತ ಶಕ್ತಿಯಾಗಿ, ಅವುಗಳು ಎದುರಿಸುತ್ತಿರುವ ಮಾರುಕಟ್ಟೆ, ಬಂಡವಾಳ, ಪರವಾನಗಿ ಮತ್ತು ಮೂಲಸೌಕರ್ಯದ ಸವಾಲುಗಳನ್ನು ಪರಿಹರಿಸಲು ಕಾರ್ಯನಿರ್ವಹಿಸಲಿದೆ.
ರೈತ ಉತ್ಪಾದಕರ ಸಂಸ್ಥೆಗಳ ವ್ಯವಹಾರವನ್ನು ವಿಸ್ತರಿಸಿ, ಅವುಗಳನ್ನು ಸ್ವಾವಲಂಬಿಗಳನ್ನಾಗಿಸುವುದರ ಜೊತೆಗೆ ಲಾಭದಾಯಕ ಸಂಸ್ಥೆಗಳನ್ನಾಗಿ ಬೆಳೆಸುವುದು “ರೈತಸಿರಿ”ಯ ಮುಖ್ಯ ಗುರಿ. ರಾಜ್ಯದಲ್ಲಿ ಗ್ರಾಮೀಣ ಸಮೃದ್ಧಿ ಸಾಧಿಸುವ ಪ್ರಮುಖ ಮಾರ್ಗವಾಗಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲಾಗುವುದು. ರಾಜ್ಯದ ರೈತ ಉತ್ಪಾದಕರ ಸಂಸ್ಥೆಗಳ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ರೈತ ಉತ್ಪಾದಕರ ಸಂಸ್ಥೆಗಳ ಸಹಕಾರ ಸಂಘದ ಅಧ್ಯಕ್ಷರಾದ ಉಪೇಂದ್ರ ಪ್ರತಾಪ್ ಸಿಂಗ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
