ಸಮಗ್ರ ಸುದ್ದಿ

ನಾಡಹಬ್ಬ ಮೈಸೂರು ದಸರಾ ನಾಳೆ ಉದ್ಘಾಟನೆ: ನಾಡಿನ ಅಧಿದೇವತೆ ಚಾಮುಂಡಿ ತಾಯಿಗೆ ವಿಶೇಷ ಪೂಜೆ

Share

ಮೈಸೂರು: ಅಕ್ಟೋಬರ್ 11ರಂದು ನಾಡಿನ ಅಧಿದೇವತೆ ಚಾಮುಂಡಿ ತಾಯಿಗೆ ಗಣ್ಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆ ಆಗಲಿದ್ದು, ಬಳಿಕ 10 ದಿನಗಳ ಕಾಲ ವಿವಿಧ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. 11ನೇ ದಿನ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆ ಇರಲಿದೆ.

ಅಕ್ಟೋಬರ್ 11ರ ಭಾನುವಾರ ಬೆಳಗ್ಗೆ 11:50ರಿಂದ 12:13ರೊಳಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬಳಿಕ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರೆ ಸಚಿವರುಗಳು ಭಾಗಿಯಾಗಲಿದ್ದಾರೆ.

ಅಕ್ಟೋಬರ್ ​11ರ ಬೆಳಗ್ಗೆ 11:30ಕ್ಕೆ ಫಲಪುಷ್ಪ ಪ್ರದರ್ಶನ, ಮಧ್ಯಾಹ್ನ 12:30ಕ್ಕೆ ಪುಷ್ಪ ಮೇಳ ಮತ್ತು ಸಸ್ಯ ತೋಟ ಉದ್ಘಾಟನೆ, ಸಂಜೆ 4 ಗಂಟೆಗೆ ದಸರಾ ಕುಸ್ತಿ ಪಂದ್ಯಾವಳಿ, ಕನ್ನಡ ಪುಸ್ತಕ ಮಾರಾಟ ಮೇಳ, ಸಂಜೆ 4:30ಕ್ಕೆ ಲಲಿತಕಲೆ ಮತ್ತು ಕರಕುಶಲ ಶಿಬಿರ, ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ, ಸಂಜೆ 5 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ, ಸಂಜೆ 6:30ಕ್ಕೆ ವಿದ್ಯುತ್ ದೀಪಾಲಂಕಾರ ಹಸಿರು ಚಪ್ಪರ, ರಾತ್ರಿ 7 ಗಂಟೆಗೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ವಸ್ತು ಪ್ರದರ್ಶನ, ಮೈಸೂರು ಅರಮನೆ ವೇದಿಕೆಯಲ್ಲಿ ನೃತ್ಯರೂಪಕ: ದೇವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ, ಈ ಎಲ್ಲಾ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ.

ಅ.12ರ ಸೋಮವಾರ ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ರಘು ದೀಕ್ಷಿತ್ ಮತ್ತು ತಂಡದ ತತ್ವ ಸಂಗೀತ (ಸಮಕಾಲೀನ) ಕಾರ್ಯಕ್ರಮ ನಡೆಯಲಿದೆ.

ಅ.13ರ ಮಂಗಳವಾರ ಬೆಳಗ್ಗೆ 6:30ಕ್ಕೆ ರಂಗೋಲಿ ಸ್ಪರ್ಧೆ, ಬೆಳಿಗ್ಗೆ 10 ಗಂಟೆಗೆ ದಸರಾ ಉದ್ಘಾಟನೆ, ಬೆಳಿಗ್ಗೆ 11 ಗಂಟೆಗೆ ಮಹಿಳಾ ದಸರಾ-2026, ಹಾಸ್ಯ/ಚುಟುಕು ಕವಿಗೋಷ್ಠಿ, ಸಂಜೆ 6 ಗಂಟೆಗೆ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರಸುಂದರಿ ದೇವಸ್ಥಾನ ಸಮೀಪ ಯುವ ದಸರಾ ಉದ್ಘಾಟನೆ ಮತ್ತು ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಸ್ವರಯಾನ ಕಾರ್ಯಕ್ರಮ ಇರಲಿದೆ.

ಅ.14ರ ಬುಧವಾರ ಬೆಳಗ್ಗೆ 10 ಗಂಟೆಗೆ ಯೋಗ ದಸರಾ, 10:30ಕ್ಕೆ ಯುವ ಕವಿಗೋಷ್ಠಿ, ಬೆ.11ಕ್ಕೆ ಮಕ್ಕಳ ದಸರಾ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಕ್ಲಾಸಿಕಲ್ ಫ್ಯೂಷನ್ ಆಕ್ಟ್ ಕಾರ್ಯಕ್ರಮ ನಡೆಯಲಿದೆ.

ಅ.15ರ ಗುರುವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ನಡಿಗೆ, ಬೆಳಿಗ್ಗೆ10:30ಕ್ಕೆ ಚಿಗುರು ಕವಿಗೋಷ್ಠಿ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಇಂಡಿಯನ್ ಕಂಟೆಂಪರರಿ ಫ್ಯೂಷನ್ ಕಾರ್ಯಕ್ರಮ ನಡೆಯಲಿದೆ.

ಅ.16ರ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಸೈಕಲ್ ಸವಾರಿ, ಬೆಳಿಗ್ಗೆ 8 ಗಂಟೆಗೆ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆ, ಬೆಳಿಗ್ಗೆ 9:30ಕ್ಕೆ ರೈತ ದಸರಾ ಮೆರವಣಿಗೆ, ಬೆಳಿಗ್ಗೆ 10:30ಕ್ಕೆ ಜನಪದ ಕಾವ್ಯಗೋಷ್ಠಿ, ಬೆಳಗ್ಗೆ11ಕ್ಕೆ ಕೃಷಿ ವಸ್ತು ಪ್ರದರ್ಶನ, ಬೆಳಗ್ಗೆ11:15ಕ್ಕೆ ರೈತ ದಸರಾ ಸಭಾಂಗಣ ಕಾರ್ಯಕ್ರಮ, ಸಂಜೆ 6 ಗಂಟೆಗೆ ಯುವ ದಸರಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಪೊಲೀಸ್ ಬ್ಯಾಂಡ್ ತಂಡದಿಂದ ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಅ.17ರ ಶನಿವಾರ ಬೆಳಗ್ಗೆ 7 ಗಂಟೆಗೆ ಪಾರಂಪರಿಕ ಉಡುಗೆಯಲ್ಲಿ ದಂಪತಿಗಳಿಗಾಗಿ ಪಾರಂಪರಿಕ ನಡಿಗೆ, ಬೆ.10:30ಕ್ಕೆ ಪ್ರಧಾನ ಕವಿಗೋಷ್ಠಿ, ಸಂಜೆ 5:30ಕ್ಕೆ ನಾಡ ಕುಸ್ತಿ/ ಪಾಯಿಂಟ್ ಕುಸ್ತಿ ಮುಕ್ತಾಯ ಸಮಾರಂಭ, ಸಂಜೆ 6ಕ್ಕೆ ಯುವ ದಸರಾ ಕಾರ್ಯಕ್ರಮ, ಸಂಜೆ 6:30ಕ್ಕೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಸಂಗೀತ ಸಂಜೆ ಹಾಗೂ ರಾತ್ರಿ 8 ಗಂಟೆಗೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ.

ಅ.18ರ ಭಾನುವಾರ ಬೆಳಗ್ಗೆ 6 ಗಂಟೆಗೆ ಗ್ರಾಮೀಣ ಯೋಗ ದಸರಾ, ಬೆಳಗ್ಗೆ10ಕ್ಕೆ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ, ಬೆ.10ಕ್ಕೆ ಸಾತಗಳ್ಳಿ ವಿಟಿಯು ಕಾಲೇಜು ಹತ್ತಿರ ಕಂಬಳ ಸ್ಪರ್ಧೆ, ಸಂಜೆ 5:30ಕ್ಕೆ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ರಾತ್ರಿ 7 ಗಂಟೆಗೆ ಅರಮನೆ ವೇದಿಕೆಯಲ್ಲಿ ಇನ್ಸ್ಟ್ರುಮೆಂಟಲ್ ಫ್ಯೂಷನ್ ಬ್ಯಾಂಡ್, ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನವಿರಲಿದೆ.

ಅ.19ರ ಸೋಮವಾರ ಬೆಳಗ್ಗೆ 6 ಗಂಟೆಗೆ ಯೋಗ ಚಾರಣ ನಡೆಯಲಿದ್ದು, ಸಂಜೆ 5:30ಕ್ಕೆ ಕಂಬಳ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಅ.20ರ ಮಂಗಳವಾರ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಪಂಜಿನ ಕವಾಯತು ಪೂರ್ವಾಭ್ಯಾಸ ನಡೆಯಲಿದೆ.

ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಚಾಲನೆ:

ಅಕ್ಟೋಬರ್ 21ರ ಬುಧವಾರ ಮಧ್ಯಾಹ್ನ 1:36 ರಿಂದ 1:56 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅರಮನೆ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಸಂಜೆ 4:10ರಿಂದ 4:35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅರಮನೆ ಒಳಾವರಣದಲ್ಲಿ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.


Share

You cannot copy content of this page