ಬೆಂಗಳೂರು:ದಸರಾ ಮಹೋತ್ಸವದ ಅಂಗವಾಗಿ ಭಾರತದ ಐತಿಹಾಸಿಕ ವೀರ-ಶೌರ್ಯದ ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ಉಣಬಡಿಸುವ ವಿನೂತನ ‘ಶಕ್ತಿ ಉತ್ಸವ’ (Shakti Utsav) ಅಕ್ಟೋಬರ್ 11ರಂದು
ಬೆಂಗಳೂರಿನ ಜಯನಗರದಲ್ಲಿರುವ ಅಣ್ಣಯ್ಯ ಸಭಾಂಗಣದಲ್ಲಿ ಆಯೋಜನೆಗೊಂಡಿದೆ.
ಮೈಸೂರು ಸಂಸ್ಥಾನದ ಮಹಾರಾಜರಾದ ಜಯಚಾಮರಾಜ ಒಡೆಯರ್ ಅವರ ಪುತ್ರಿ ಮಹಾರಾಜಕುಮಾರಿ ಶ್ರೀಮತಿ ಕಾಮಾಕ್ಷಿ ದೇವಿ ಹಾಗೂ ಅವರ ಸೊಸೆ ಶ್ರೀಮತಿ ದರ್ಶಿಕಾ ಕುಮಾರಿ ಅವರು ಈ ಕಾರ್ಯಕ್ರಮದಲ್ಲಿ ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾರ್ವಜನಿಕರಿಗೆ ಮುಕ್ತ ಹಾಗೂ ಉಚಿತ ಪ್ರವೇಶವಿರುವ ಈ ಡಿಜಿಟಲ್ ದಸರಾ ಅನುಭವ ಕಾರ್ಯಕ್ರಮವನ್ನು ‘ಪರಮ್ ಹಿಸ್ಟರಿ ಸೆಂಟರ್’ (Param History Centre) ಮತ್ತು ‘ಯುವಕ ಸಂಘ’ ಜಂಟಿಯಾಗಿ ಆಯೋಜಿಸಿವೆ.
ತಂತ್ರಜ್ಞಾನದ ಮೂಲಕ ಇತಿಹಾಸ ದರ್ಶನ:
ಭಾರತದ ಶೌರ್ಯ ಪರಂಪರೆಯನ್ನು ವಿಭಿನ್ನ ಆಯಾಮಗಳಲ್ಲಿ ಕಟ್ಟಿಕೊಡಲು ಹಲವು ಡಿಜಿಟಲ್ ಆಕರ್ಷಣೆಗಳನ್ನು ಸಿದ್ಧಪಡಿಸಲಾಗಿದ್ದು, ಹಾಲೋಗ್ರಾಮ್ ತಂತ್ರಜ್ಞಾನದ ಮೂಲಕ ಐತಿಹಾಸಿಕ ವೀರರ ದರ್ಶನ, ‘ವಾರ್‌ಫ್ಲಿಕ್ಸ್’ ಮೂಲಕ ಹೆಮ್ಮೆಯ ಯೋಧರ ಸಾಹಸಗಾಥೆಗಳ ಪರಿಚಯ, ವರ್ಚುವಲ್ ರಿಯಾಲಿಟಿ (VR) ತಂತ್ರಜ್ಞಾನದಡಿ ಬ್ರಹ್ಮಾಂಡದ ವಿಸ್ಮಯಗಳ ಅನುಭವ ಹಾಗೂ ಆಸಕ್ತಿದಾಯಕ ಸಂವಾದಾತ್ಮಕ ರಸಪ್ರಶ್ನೆಗಳು ಈ ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿವೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ: 9035034728 ಅಥವಾ ಇಮೇಲ್: events@paramexp.org ನ್ನು ಸಂಪರ್ಕಿಸಬಹುದು.
