ಬೆಂಗಳೂರು:ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ರಾಜ್ಯೋತ್ಸವ ಪ್ರಶಸ್ತಿ’ ವಿಜೇತರ ಅಧಿಕೃತ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಸಾಹಿತ್ಯ, ಕಲೆ, ರಂಗಭೂಮಿ, ಜಾನಪದ, ಸಮಾಜ ಸೇವೆ, ವೈದ್ಯಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಟ್ಟು 71 ಸಾಧಕರು ಈ ಬಾರಿಯ ಗೌರವಕ್ಕೆ ಭಾಜನರಾಗಿದ್ದಾರೆ.
ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ಹೊರನಾಡು-ಹೊರದೇಶಗಳಲ್ಲಿ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕ್ಷೇತ್ರವಾರು ಪ್ರಶಸ್ತಿ ಪುರಸ್ಕೃತರ ವಿವರವಾದ ಪಟ್ಟಿ:
ಜಾನಪದ ಕ್ಷೇತ್ರ:
ಶ್ರೀ ದಾವಲಸಾಬ ಅತ್ತಾರ – ಕೊಪ್ಪಳ
ಶ್ರೀಮತಿ ಗೌರಮ್ಮ – ಚಾಮರಾಜನಗರ
ಶ್ರೀ ಪಾಂಡಪ್ಪ ದೇವಲಪ್ಪ ಲಮಾಣಿ – ಗದಗ
ಶ್ರೀ ಎ.ಆರ್. ಸತ್ಯನಾರಾಯಣ – ಬೆಂಗಳೂರು ದಕ್ಷಿಣ
ಶ್ರೀ ಈರಣ್ಣ ರುದ್ರಾಕ್ಷಿ – ರಾಯಚೂರು
ಶ್ರೀ ಶಿವಲಿಂಗಪ್ಪ (ತಂದೆ ರಾಮಣ್ಣ) – ಕೊಪ್ಪಳ
ಶ್ರೀ ಸುರೇಶ್ ರಾಮಚಂದ್ರ ಜೋಶಿ – ವಿಜಯಪುರ
ಸಂಗೀತ, ನೃತ್ಯ ಮತ್ತು ಚಲನಚಿತ್ರ ಕ್ಷೇತ್ರ:
ಡಾ. ಸಿ.ಎ. ಶ್ರೀಧರ್ (ಸಂಗೀತ) – ಮೈಸೂರು
ಡಾ. ಎ. ನಾರಾಯಣ ಸ್ವಾಮಿ (ಸಂಗೀತ) – ಹಾಸನ
ಶ್ರೀ ಬಿ. ಮುರುಳಿ (ಸಂಗೀತ) – ಬೆಂಗಳೂರು ಗ್ರಾಮಾಂತರ
ಡಾ. ಸತ್ಯನಾರಾಯಣ ರಾಜು (ನೃತ್ಯ) – ಬೆಂಗಳೂರು ನಗರ
ಶ್ರೀ ಬಾಬಜೀ ವೆಂಕಟರಮಣ (ಚಲನಚಿತ್ರ) – ಧಾರವಾಡ
ಶ್ರೀ ಅಶೋಕ್ (ಚಲನಚಿತ್ರ) – ಬೆಂಗಳೂರು ಗ್ರಾಮಾಂತರ
ಶ್ರೀ ಕೆ.ಎಸ್. ರವೀಂದ್ರ ನಾಥ್ (ಕಿರುತೆರೆ) – ಬೆಂಗಳೂರು ನಗರ
ಶ್ರೀ ಗೋಪಾಲ ಗಾಣಿಗ (ಯಕ್ಷಗಾನ) – ಉಡುಪಿ
ಶ್ರೀಮತಿ ಹುಲಿಗೆಮ್ಮ (ಬಯಲಾಟ) – ಬಳ್ಳಾರಿ
ರಂಗಭೂಮಿ ಕ್ಷೇತ್ರ:
ಶ್ರೀ ಡಿ. ಕೆಂಪಣ್ಣ – ಬೆಂಗಳೂರು ಗ್ರಾಮಾಂತರ
ಶ್ರೀಮತಿ ಕೆ. ಜಯಲಕ್ಷ್ಮಿ ಪಾಟೀಲ್ – ಧಾರವಾಡ
ಶ್ರೀ ಜಿ. ಡಿ. ತಿಮ್ಮಯ್ಯ – ಚಿತ್ರದುರ್ಗ
ಶ್ರೀಮತಿ ಕೆ.ಆರ್. ಸುಮತಿ – ಮೈಸೂರು
ಶ್ರೀ ಹೆಚ್. ವಿ. ಪುಟ್ಟವೀರಪ್ಪ – ಬೆಂಗಳೂರು ದಕ್ಷಿಣ
ಶ್ರೀ ಹೊನ್ನ ನಾಯಕ್ – ಮೈಸೂರು
ಕಲೆ, ಕರಕುಶಲ ಮತ್ತು ಕೃಷಿ ಕ್ಷೇತ್ರ:
ಶ್ರೀ ಜಿ.ವಿ. ಹಂಸಾನಂದ ಆಚಾರ್ಯ (ಶಿಲ್ಪಕಲೆ) – ವಿಜಯನಗರ
ಶ್ರೀ ಕಾಡಪ್ಪ (ಶಿಲ್ಪಕಲೆ) – ಬೆಳಗಾವಿ
ಶ್ರೀ ಸಿ.ಬಿ. ಸೋಮಶೆಟ್ಟಿ (ಚಿತ್ರಕಲೆ) – ಬೀದರ್
ಶ್ರೀಮತಿ ಶಾಂತಾಬಾಯಿ ಮೋಹನ್ ಕಾಂಬಳೆ (ಕರಕುಶಲ) – ಬೀದರ್
ಶ್ರೀ ಹೆಚ್.ಕೆ. ಶ್ರೀಕಂಠು (ಕೃಷಿ) – ಬೆಂಗಳೂರು ದಕ್ಷಿಣ
ಶ್ರೀ ಬಿ.ಎ. ಚನ್ನಪ್ಪಗೌಡ (ಕೃಷಿ) – ಬೆಂಗಳೂರು ನಗರ
ಡಾ. ಸ್ವಾಮಿ ಆನಂದ್ ಆರ್. (ಪರಿಸರ) – ಮೈಸೂರು
ವಿಜ್ಞಾನ, ಮಾಧ್ಯಮ ಮತ್ತು ಶಿಕ್ಷಣ:
ಪ್ರೊ. ರಾಜಾಸಾಬ್ ಎ. ಎಚ್. (ವಿಜ್ಞಾನ – ತಂತ್ರಜ್ಞಾನ) – ಕಲಬುರಗಿ
ಡಾ. ರಾಜಶೇಖರ ಮೂರ್ತಿ (ವಿಜ್ಞಾನ – ತಂತ್ರಜ್ಞಾನ) – ಕೆನಡಾ (ಹೊರದೇಶ)
ಶ್ರೀ ಉಮಾಪತಿ (ಮಾಧ್ಯಮ) – ಚಿತ್ರದುರ್ಗ
ಶ್ರೀಮತಿ ಎಂ.ಪಿ. ಸುಶೀಲ (ಮಾಧ್ಯಮ) – ಬೆಂಗಳೂರು ನಗರ
ಶ್ರೀ ವಿಶ್ವನಾಥ್ ಸುವರ್ಣ (ಮಾಧ್ಯಮ/ಛಾಯಾಚಿತ್ರ) – ದಕ್ಷಿಣ ಕನ್ನಡ
ಶ್ರೀ ಫಾ. ಜೊಸೆಫ್ (ಉಪ ಕುಲಪತಿಗಳು, ಕ್ರೈಸ್ಟ್ ವಿಶ್ವವಿದ್ಯಾಲಯ – ಶಿಕ್ಷಣ) – ಬೆಂಗಳೂರು ನಗರ
ಶ್ರೀ ಶಾಂತಪ್ಪ ದಶವಂತ (ಶಿಕ್ಷಣ) – ವಿಜಯಪುರ
ಶ್ರೀಮತಿ ಸಂಗೀತಾ ಎನ್. ಕಟ್ಟಿಮನಿ (ಶಿಕ್ಷಣ) – ಕಲಬುರಗಿ
ಡಾ. ಎನ್.ಎಸ್. ರಂಗರಾಜು (ಶಿಕ್ಷಣ) – ಮೈಸೂರು
ಸಾಹಿತ್ಯ ಮತ್ತು ನ್ಯಾಯಾಂಗ
ಡಾ. ಇಂದಿರಾ ಹೆಗಡೆ (ಸಾಹಿತ್ಯ) – ದಕ್ಷಿಣ ಕನ್ನಡ
ಶ್ರೀ ವೀರಹನುಮಾನ್ (ಸಾಹಿತ್ಯ) – ರಾಯಚೂರು
ಪ್ರೊ. ನಾರಾಯಣಘಟ್ಟ (ಸಾಹಿತ್ಯ) – ತುಮಕೂರು
ಶ್ರೀ ಸಿ. ಮಹೇಶ್ವರಪ್ಪ ಚಟ್ನಳ್ಳಿ (ಸಾಹಿತ್ಯ) – ಚಿಕ್ಕಮಗಳೂರು
ಡಾ. ಕರೀಗೌಡ ಬೀಚನಹಳ್ಳಿ (ಸಾಹಿತ್ಯ) – ತುಮಕೂರು
ಡಾ. ಸಿದ್ಧರಾಮ ಹೊನ್ಕಲ್ (ಸಾಹಿತ್ಯ) – ಯಾದಗಿರಿ
ಶ್ರೀ ಬಿ.ವಿ. ಆಚಾರ್ಯ (ನ್ಯಾಯಾಂಗ) – ಉಡುಪಿ
ಸಮಾಜ ಸೇವೆ ಮತ್ತು ವೈದ್ಯಕೀಯ ಕ್ಷೇತ್ರ
ಪೂಜ್ಯ ಶ್ರೀ ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ – ಗದಗ
ಶ್ರೀ ಬಸವರಾಜು – ಮಂಡ್ಯ
ಶ್ರೀ ಕಾಗೋಡು ತಿಮ್ಮಪ್ಪ – ಶಿವಮೊಗ್ಗ
ಡಾ. ಎಸ್.ಎಂ. ಎಲಿ – ದಾವಣಗೆರೆ
ಡಾ. ಜಿ.ಎಸ್. ಚಂದ್ರ ಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್) – ಉತ್ತರ ಕನ್ನಡ
ಡಾ. ಶಿವಾನಂದ ಮಹಾಸ್ವಾಮಿ – ಕಲಬುರಗಿ
ಶ್ರೀ ಕೃಷ್ಣೇಗೌಡ – ಚಿಕ್ಕಬಳ್ಳಾಪುರ
ಶ್ರೀ ಎ.ಸಿ. ಭಂಡಾರಿ (ಅಖಿಲ ಭಾರತ ತುಳು ಒಕ್ಕೂಟ) – ದಕ್ಷಿಣ ಕನ್ನಡ
ಶ್ರೀಮತಿ ಗುರಮ್ಮ ಹಂಪಯ್ಯ ಸಂಕಿನಮಠ – ಬಾಗಲಕೋಟೆ
ಡಾ. ವಿಜಯೇಂದ್ರ ಹೊನ್ನೂರಪ್ಪ (ವೈದ್ಯಕೀಯ) – ಬೆಂಗಳೂರು ನಗರ
ಡಾ. ಸುಜಾತ ಮಲ್ಲಿಕಾರ್ಜುನ ಜಾಲಿ (ವೈದ್ಯಕೀಯ) – ಬೆಳಗಾವಿ
ಕ್ರೀಡೆ, ಆಡಳಿತ ಮತ್ತು ಸಂಕೀರ್ಣ ಕ್ಷೇತ್ರಗಳು:
ಶ್ರೀ ಜಿಮ್ ರವಿ (ಕ್ರೀಡೆ) – ಕೋಲಾರ
ಡಾ. ಎ.ಬಿ. ಸುಬ್ಬಯ್ಯ (ಕ್ರೀಡೆ) – ಕೊಡಗು
ಶ್ರೀ ಎಂ. ಗಿರೀಶ್ (ಕ್ರೀಡೆ) – ಬೆಂಗಳೂರು ನಗರ
ಶ್ರೀಮತಿ ತೆರೆಸಾ ಭಟ್ಟಾಚಾರ್ಯ (ಆಡಳಿತ) – ಬೆಂಗಳೂರು ನಗರ
ಡಾ. ಕೆ.ಎಸ್. ಸೋಮಶೇಖರ್ (ಆಡಳಿತ) – ಹೊರನಾಡು
ಡಾ. ಕೆ.ಎನ್. ವೆಂಕಟ ಕೃಷ್ಣಾರಾವ್ (ಇಂಜಿನಿಯರಿಂಗ್) – ಚಿಕ್ಕಬಳ್ಳಾಪುರ
ಶ್ರೀ ರಮೇಶ್ ಗೌಡ (ಮಾಜಿ ಅಧ್ಯಕ್ಷರು, ಅಕ್ಕ ಅಮೇರಿಕಾ) – ಹೊರನಾಡು/ಹೊರದೇಶ
ಶ್ರೀಮತಿ ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ (ಸಂಕೀರ್ಣ) – ಬಾಗಲಕೋಟೆ
ಶ್ರೀ ಡಿ.ಎಸ್. ಚೌಗಲೆ (ಸಂಕೀರ್ಣ) – ಬೆಳಗಾವಿ
ಶ್ರೀ ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ (ಸಂಕೀರ್ಣ) – ಬೆಂಗಳೂರು ನಗರ
ಶ್ರೀ ಬಿ.ಪಿ. ಆರಾಧ್ಯ (ಸಂಕೀರ್ಣ/ವಾಸ್ತುಶಾಸ್ತ್ರ) – ಬೆಂಗಳೂರು ದಕ್ಷಿಣ
ಶ್ರೀ ರವಿ ಪ್ರವೀಣ್ ನೊರೋನಾ (ಸಂಕೀರ್ಣ) – ಬೆಂಗಳೂರು ನಗರ
ಶ್ರೀ ಎಂ.ಆರ್. ಜೈಶಂಕರ್ (ಸಂಕೀರ್ಣ) – ಚಿಕ್ಕಮಗಳೂರು
ಶ್ರೀ ಪ್ರಸಾದ್ ಬಿಡ್ಡಪ್ಪ (ಸಂಕೀರ್ಣ) – ಕೊಡಗು
ಶ್ರೀ ವಾಸಪ್ಪ ಯಲ್ಲಪ್ಪ ಕುಸಗೂರ (ಸಂಕೀರ್ಣ) – ಹಾವೇರಿ
ಪ್ರಶಸ್ತಿ ಪ್ರದಾನ ಸಮಾರಂಭ
ನವೆಂಬರ್ 1 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ
ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಸ್ತಿ ವಿಜೇತರಿಗೆ ಚಿನ್ನದ ಪದಕ, ರೂ. 5 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
