ಸಮಗ್ರ ಸುದ್ದಿ

ಹಾಸನಾಂಬ ದೇವಾಲಯಕ್ಕೆ ದಾಖಲೆಯ ಆದಾಯ

Share

ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಶ್ರೀ ಹಾಸನಾಂಬೆ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನೆನ್ನೆ ವಿದ್ಯುತ್ತ ತೆರೆಕಂಡಿದ್ದು ಈ ಬಾರಿಯ ಉತ್ಸವದಲ್ಲಿ ಆದಾಯ ದಾಖಲೆಯ ಇತಿಹಾಸ ಬರೆದಿದೆ

ಉಪ ವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಅವರ ನೇತೃತ್ವದಲ್ಲಿ ಇಂದು ಹಾಸನಾಂಬ ಹುಂಡಿ ಎಣಿಕೆ ಕಾರ್ಯ ನಡೆಯಿತು, ಲಾಡು ಪ್ರಸಾದ ಮಾರಾಟ, ದರ್ಶನದ ಟಿಕೆಟ್ ಮಾರಾಟ, ಹುಂಡಿಗಳಿಗೆ ಭಕ್ತರು ಹಾಕಿದ ಕಾಣಿಕೆ, ದೇಣಿಗೆಯಿಂದ ಬಂದ ಹಣ, ಈ ಹುಂಡಿಯಿಂದ ಬಂದ ಹಣ ಮತ್ತು ಜಾಹೀರಾತು ನೀಡಿದ ಹಣ ಸೇರಿ ಒಟ್ಟು 29,55, 27,852 ಕೋಟಿ ರೂಪಾಯಿ ಆದಾಯ ಗಳಿಸಿದೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್, ಹಾಸನಾಂಬ ಹುಂಡಿ ಎಣಿಕೆ ಮುಕ್ತವಾಗಿದೆ ಒಂದು ಸಾವಿರ ರೂಪಾಯಿ ದರ್ಶನದ ಟಿಕೆಟ್ ಮಾರಾಟದಿಂದ 16,98,11,257 ರೂ., 300 ರೂಪಾಯಿ ಟಿಕೆಟ್ ಮಾರಾಟದಿಂದ 7 ಕೋಟಿ 24 ಲಕ್ಷ, ಲಾಡು ಪ್ರಸಾದ ಮಾರಾಟದಿಂದ 1,35,99,156 ರೂ. ಆದಾಯ ಬಂದಿದೆ ಎಂದು ತಿಳಿಸಿದರು

ದೇಣಿಗೆಯಿಂದ 5,91,228 ರೂ., ಈ ಹುಂಡಿ ಮೂಲಕ 13,264 ರೂ., ಜಾಹಿರಾತುವಿನಿಂದ 5,74,000 ರೂಪಾಯಿ ಹಣ ಬಂದಿದ್ದು ಕಳೆದ ಬಾರಿಗಿಂತ 4 ಕೋಟಿ ಹೆಚ್ಚು ಆದಾಯ ಲಭಿಸಿದೆ ಅಲ್ಲದೆ ಕೆಳೆದ ವರ್ಷಕ್ಕಿಂತ ಈ ಬಾರಿ 6 ಲಕ್ಷ ಹೆಚ್ಚಿನ ಭಕ್ತರು ದರ್ಶನ ಪಡೆದಿದ್ದು ಇದಲ್ಲದೆ ಚಿನ್ನ, ಬೆಳ್ಳಿ ಅಭರಾಣಗಳು, ವಿದೇಶಿ ಕರೆನ್ಸಿ, ಹಳೆ ನೋಟುಗಳು, ಸಿಕ್ಕಿವೆ ಚಿನ್ನಾಭರಣಗಳನ್ನು ಹೊರತುಪಡಿಸಿ ಒಟ್ಟು 29,55, 27,852 ಕೋಟಿ ರೂಪಾಯಿ ಆದಾಯ ಬಂದದ್ದು ಆದಾಯದಲ್ಲಿ ಈ ಭಾರಿ ಹೊಸ ಇತಿಹಾಸ ನಿರ್ಮಿಸಿದೆ ಎಂದು ತಿಳಿಸಿದರು.


Share

You cannot copy content of this page