ಸಮಗ್ರ ಸುದ್ದಿ

ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ರೈಲು ಮಾರ್ಗಕ್ಕೆ ಶಕ್ತಿ ತುಂಬಿದ KPTCL – ಕಡಿದಾದ ಪ್ರದೇಶಗಳಲ್ಲಿ ಕಾಮಗಾರಿ – 12 ರೈಲ್ವೆ ಟ್ರಾಕ್ಷನ್ ಕೇಂದ್ರಗಳಿಗೆ ಸಮರ್ಪಕ ವಿದ್ಯುತ್ ಮೂಲಸೌಕರ್ಯ: ಸಚಿವ ಕೆ.ಜೆ. ಜಾರ್ಜ್

Share

ಬೆಂಗಳೂರು: ಪಶ್ಚಿಮ ಘಟ್ಟದ ಅತ್ಯಂತ ಸವಾಲಿನ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ರೈಲು ಮಾರ್ಗ ಹೊಸದಾಗಿ ವಿದ್ಯುದ್ದೀಕೃತಗೊಂಡಿರುವ ಹಿನ್ನೆಲೆಯಲ್ಲಿ, ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರಕ್ಕೆ ಅಗತ್ಯವಾದ ವಿಶ್ವಾಸಾರ್ಹ traction power ಒದಗಿಸಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಬಲಿಷ್ಠ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ *ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ನವೆಂಬರ್ 13ರಂದು ಆರಂಭವಾಗಲಿರುವ ಯಶವಂತಪುರ–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯೊಂದಿಗೆ, ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ಮಾರ್ಗದಲ್ಲಿ ಮೊದಲ ಬಾರಿಗೆ ವಂದೇ ಭಾರತ್ ವಿದ್ಯುತ್ ರೈಲು ಸಂಚರಿಸಲಿದೆ.

ಈ ಮಾರ್ಗಕ್ಕೆ ಅಗತ್ಯವಾದ traction power ಮೂಲಸೌಕರ್ಯ ಕಾಮಗಾರಿಗಳು ಸಮಯಬದ್ಧವಾಗಿ ಅನುಷ್ಠಾನಗೊಳ್ಳುವಂತೆ ಖಚಿತಪಡಿಸಲು ಇಂಧನ ಸಚಿವ ಶ್ರೀ ಕೆ.ಜೆ. ಜಾರ್ಜ್ ಅವರು ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿ, KPTCL, ರೈಲ್ವೆ ಹಾಗೂ ಸಂಬಂಧಿತ ಅಧಿಕಾರಿಗಳ ನಡುವೆ ತ್ವರಿತ ಸಮನ್ವಯಕ್ಕೆ ಅಗತ್ಯ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರು. ಅವರ ಮಾರ್ಗದರ್ಶನದಲ್ಲಿ ಪ್ರಸರಣ ಜಾಲ ಬಲವರ್ಧನೆ, ಉಪಕೇಂದ್ರಗಳ ಸಾಮರ್ಥ್ಯ ವೃದ್ಧಿ ಹಾಗೂ ರೈಲ್ವೆ ಟ್ರಾಕ್ಷನ್ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಆದ್ಯತೆಯ ಮೇರೆಗೆ ವೇಗ ನೀಡಿ, ಅಗತ್ಯ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗಿದೆ.

ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು, ತೀವ್ರ ಏರಿಳಿತ, ಭಾರಿ ಮಳೆ ಹಾಗೂ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಯಲ್ಲಿ traction-power ಮೂಲಸೌಕರ್ಯವನ್ನು ಸಜ್ಜುಗೊಳಿಸುವುದು ದೊಡ್ಡ ತಾಂತ್ರಿಕ ಸವಾಲಾಗಿತ್ತು. ಈ ಸವಾಲಿನ ನಡುವೆಯೂ KPTCLನ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿ, ಅಗತ್ಯ ಪ್ರಸರಣ ಸಂಪರ್ಕ, ಗ್ರಿಡ್ ಬಲವರ್ಧನೆ ಮತ್ತು ವಿದ್ಯುತ್ ಪೂರೈಕೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಿದ್ದಾರೆ.

ಮಾರ್ಗದ 12 Railway Traction Substations (RTSS)ಗಳಿಗೆ 12 KPTCL ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಹೊಸ overhead transmission lines, underground cables, LILO connectivity, switching stations ಹಾಗೂ upstream transformer capacity augmentation ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

“ಪಶ್ಚಿಮ ಘಟ್ಟದಂತಹ ಅತ್ಯಂತ ದುರ್ಗಮ ಪ್ರದೇಶದಲ್ಲಿ ಹೊಸದಾಗಿ ವಿದ್ಯುದ್ದೀಕೃತಗೊಂಡ ರೈಲು ಮಾರ್ಗಕ್ಕೆ ನಿರಂತರ ಮತ್ತು ವಿಶ್ವಾಸಾರ್ಹ traction power ಒದಗಿಸುವುದು ದೊಡ್ಡ ತಾಂತ್ರಿಕ ಜವಾಬ್ದಾರಿ. KPTCL ಸಿಬ್ಬಂದಿ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಶ್ರಮಿಸಿ ಅಗತ್ಯ ಪ್ರಸರಣ ಮೂಲಸೌಕರ್ಯವನ್ನು ಸಜ್ಜುಗೊಳಿಸಿದ್ದಾರೆ. ಅವರ ತಾಂತ್ರಿಕ ಕೌಶಲ್ಯ, ಬದ್ಧತೆ ಹಾಗೂ ಆಡಳಿತ ಮಂಡಳಿಯ ಸಮನ್ವಯದ ಪ್ರಯತ್ನ ಶ್ಲಾಘನೀಯ,” ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

“ಈ ಹೊಸ ರೈಲು ಸಂಪರ್ಕವು ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ನಡುವಿನ ಪ್ರಯಾಣವನ್ನು ಸುಗಮಗೊಳಿಸುವುದರ ಜೊತೆಗೆ ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಸೇರಿದಂತೆ ಕರಾವಳಿ ಭಾಗದ ಪ್ರವಾಸೋದ್ಯಮ, ಆತಿಥ್ಯ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ,” ಎಂದು ತಿಳಿಸಿದರು.

ಇಂಧನ ಸಚಿವರ ನಿರ್ದೇಶನದಂತೆ KPTCL ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರು ಅಧಿಕಾರಿಗಳೊಂದಿಗೆ ವಿಶೇಷ ಸಿದ್ಧತಾ ಪರಿಶೀಲನೆ ನಡೆಸಿ, ವಂದೇ ಭಾರತ್ ಸಂಚಾರ ಆರಂಭಕ್ಕೂ ಮುನ್ನ ಸಂಬಂಧಿತ ಉಪಕೇಂದ್ರ ಮತ್ತು ಪ್ರಸರಣ ವ್ಯವಸ್ಥೆಗಳ ಕಾರ್ಯಾಚರಣಾ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

“ಪಶ್ಚಿಮ ಘಟ್ಟದ ಸವಾಲಿನ ಪರಿಸ್ಥಿತಿಯಲ್ಲಿ ವಿಶ್ವಾಸಾರ್ಹ traction power ಒದಗಿಸಲು ವಿವಿಧ ಹಂತಗಳಲ್ಲಿ ಪ್ರಸರಣ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ. ವಂದೇ ಭಾರತ್ ಸಂಚಾರದ ಸಂದರ್ಭದಲ್ಲಿ ಪ್ರಮುಖ KPTCL ಉಪಕೇಂದ್ರಗಳು ಮತ್ತು ಸಂಪರ್ಕ ಕೇಂದ್ರಗಳಲ್ಲಿ ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಿ 24×7 ಮೇಲ್ವಿಚಾರಣೆ ನಡೆಸಲಾಗುವುದು,” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

“12 Railway Traction Substationsಗೆ ಅಗತ್ಯ upstream grid connectivity, substation capacity ಹಾಗೂ transmission infrastructure ಕಲ್ಪಿಸುವಲ್ಲಿ KPTCL ತಂಡಗಳು ಮಹತ್ವದ ಕೆಲಸ ಮಾಡಿವೆ. ವಿಶೇಷವಾಗಿ ಘಾಟ್ ಪ್ರದೇಶದ ಸವಾಲುಗಳನ್ನು ಎದುರಿಸಿ ತಾಂತ್ರಿಕ ಕಾಮಗಾರಿಗಳನ್ನು ನಿರ್ವಹಿಸಿರುವ ಇಂಜಿನಿಯರ್‌ಗಳು, ಸಿಬ್ಬಂದಿ ಹಾಗೂ KPTCL ಆಡಳಿತ ಮಂಡಳಿಯ ಪ್ರಯತ್ನ ಅಭಿನಂದನಾರ್ಹ,” ಎಂದು ಹೇಳಿದರು.

KPTCLನ ಪ್ರಮುಖ ತಾಂತ್ರಿಕ ಕೊಡುಗೆಗಳು

  • 12 KPTCL ಉಪಕೇಂದ್ರಗಳಿಂದ 12 Railway Traction Substationsಗೆ ವಿದ್ಯುತ್ ಸಂಪರ್ಕ
  • ಸಿದ್ದಾಪುರಕ್ಕೆ 4.5 ಕಿ.ಮೀ. 66 ಕೆವಿ ಪ್ರಸರಣ ಮಾರ್ಗ
  • ಸಕಲೇಶಪುರ RTSSಗೆ 220 ಕೆವಿ UG ಹಾಗೂ overhead transmission connectivity
  • ನೆರಳಕಟ್ಟೆಗೆ 2.760 ಕಿ.ಮೀ. 220 ಕೆವಿ underground cable
  • ಜೋಕಟ್ಟೆ, ಮುಲ್ಕಿ, ಬಾರ್ಕೂರು ಮತ್ತು ಸೇನಾಪುರಕ್ಕೆ 110 ಕೆವಿ transmission/LILO/switching infrastructure
  • ಅಂಚೆಪಾಳ್ಯ ಹಾಗೂ ಯಾಚೇನಹಳ್ಳಿ ಉಪಕೇಂದ್ರಗಳಲ್ಲಿ 220/66 ಕೆವಿ transformer capacity augmentation
  • ಮುರುಡೇಶ್ವರ, ಕುಮಟಾ ಮತ್ತು ಕಾರವಾರ RTSSಗಳಿಗೆ ಹಾಲಿ KPTCL ಜಾಲದಿಂದ ವಿದ್ಯುತ್ ಬೆಂಬಲ
  • ವಂದೇ ಭಾರತ್ ಸಂಚಾರದ ಹಿನ್ನೆಲೆಯಲ್ಲಿ 24×7 technical monitoring ಮತ್ತು emergency response ವ್ಯವಸ್ಥೆ

ಪಶ್ಚಿಮ ಘಟ್ಟದ ಹೊಸ ವಿದ್ಯುದ್ದೀಕೃತ ಮಾರ್ಗದಲ್ಲಿ ವಂದೇ ಭಾರತ್ ಸೇವೆ ಆರಂಭವಾಗುವುದು ಕರ್ನಾಟಕದ ರೈಲು ಸಂಪರ್ಕದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಅದಕ್ಕೆ ಅಗತ್ಯ ಶಕ್ತಿ ಒದಗಿಸುವಲ್ಲಿ KPTCL ನಿರ್ಮಿಸಿರುವ ಪ್ರಸರಣ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸಿದೆ.


Share

You cannot copy content of this page