ಸಮಗ್ರ ಸುದ್ದಿ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ದೇಶದ 5 ನೇ ಅತ್ಯುತ್ತಮ ಕ್ಯಾನ್ಸರ್ ಆಸ್ಪತ್ರೆ

Share

ಬೆಂಗಳೂರು: ಭಾರತದ ಪ್ರಮುಖ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಗಳಲ್ಲಿ ಒಂದಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ದಿ ವೀಕ್ ನಿಯತಕಾಲಿಕೆಯ ನವೆಂಬರ್ 2025 ರ ಆವೃತ್ತಿಯಲ್ಲಿ ಭಾರತದ ಅತ್ಯುತ್ತಮ ಆಂಕೊಲಾಜಿ ಆಸ್ಪತ್ರೆಗಳಲ್ಲಿ 5 ನೇ ಸ್ಥಾನ, ಭಾರತದ ಸರ್ಕಾರಿ ಆಸ್ಪತ್ರೆಗಳಲ್ಲಿ 3 ನೇ ಸ್ಥಾನ ಮತ್ತು ಕರ್ನಾಟಕ ರಾಜ್ಯದಲ್ಲಿ 1 ನೇ ಸ್ಥಾನ ಪಡೆದಿದೆ.

ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶೈಕ್ಷಣಿಕ ಕೊಡುಗೆಯಲ್ಲಿ ಸಂಸ್ಥೆಯ ಕೊಡುಗೆಗೆ ಸಂದ ಗೌರವಾಗಿದೆ. ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ (DME) ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ.

ರಾಜ್ಯಾದ್ಯಂತ ಸಾರ್ವಜನಿಕ ವಲಯದ ಕ್ಯಾನ್ಸರ್ ಚಿಕಿತ್ಸಾ ಸೇವೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಕಿದ್ವಾಯಿ ಸಂಸ್ಥೆಯು ಬಲಪಡಿಸಿದೆ.

1973 ರಲ್ಲಿ ಸ್ಥಾಪನೆಯಾಗಿ ಕರ್ನಾಟಕ ಸರ್ಕಾರದಡಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಕಿದ್ವಾಯಿ ಸ್ಮಾರಕ‌ ಗಂಥಿ ಸಂಸ್ಥೆಯು, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವಾಗಿದೆ. ಈ ಸಂಸ್ಥೆಯು ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ವಿಕಿರಣ ಆಂಕೊಲಾಜಿಯನ್ನು ಒಳಗೊಂಡ ಸಮಗ್ರ, ಬಹುಶಿಸ್ತೀಯ ಆಂಕೊಲಾಜಿ ಸೇವೆಗಳನ್ನು ಒದಗಿಸುತ್ತಿದೆ.

ಕರ್ನಾಟಕ ಮತ್ತು ನೆರೆಯ ರಾಜ್ಯಗಳ ರೋಗಿಗಳಿಗೆ ಕೈಗೆಟುಕುವ, ಉತ್ತಮ ಗುಣಮಟ್ಟದ ಕ್ಯಾನ್ಸರ್ ಆರೈಕೆಯನ್ನು ಒದಗಿಸುತ್ತಿದೆ.

ದೇಶದ ಆಸ್ಪತ್ರೆಗಳ ಮೌಲ್ಯಮಾಪನ ಅಧ್ಯಯನಗಳಲ್ಲಿ ಒಂದಾದ ವೀಕ್-ಹಂಸ ಸಮೀಕ್ಷೆಯನ್ನು ಆಧರಿಸಿ ಈ ಮನ್ನಣೆ ದೊರೆತಿದೆ. ಈ ಸಮೀಕ್ಷೆಯಲ್ಲಿ ಭಾರತದಾದ್ಯಂತ 788 ವೈದ್ಯಕೀಯ ವೈದ್ಯರು ಮತ್ತು 1,609 ತಜ್ಞರು ಭಾಗವಹಿಸಿದ್ದರು.

ಈ ಪ್ರತಿಷ್ಠಿತ ಸಂಸ್ಥೆಗೆ ನೀಡುವ ದೇಣಿಗೆಗಳು 1961 ರ ಐಟಿ ಕಾಯ್ದೆಯ ಯು/ಎಸ್ 80 ಜಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿವೆ. ವೆಬ್‌ಸೈಟ್: www.kmio.karnataka@gov.in ಮೂಲಕ ಸಾರ್ವಜನಿಕರು ಪ್ರೋತ್ಸಾಹ ನೀಡಬಹುದಾಗಿದೆ ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page