ಐಸಿಸಿ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯಾವಳಿ ನಡೆಯಲಿದೆ.
ಶ್ರೀಲಂಕಾದ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹ್ರಾಟ್ಯಿಕ್ ಗೆಲುವಿನ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಪಡೆಯಿದೆ. ಇಂದು ಈ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆಯಲಿದೆ.ಪಂದ್ಯಕ್ಕಾಗಿ ಉಭಯ ತಂಡಗಳು ಕಠಿಣ ಅಭ್ಯಾಸವನ್ನು ಸಹ ಕೈಗೊಂಡಿವೆ.
ಸ್ಪಿನ್ ಸ್ನೇಹಿಯಾಗಿರುವ ಕೊಲಂಬೋ ಪಿಚ್ ನಲ್ಲಿ ಭಾರತದ ಬ್ಯಾಟ್ಸ್ ಮನ್ ಗಳಿಗೆ ಪಾಕಿಸ್ತಾನದ ಸ್ಪಿನ್ನರ್ ಗಳಿಂದ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.
ವಿಭಿನ್ನ ಶೈಲಿಯ ಬೌಲಿಂಗ್ ನಿಂದ ಹೆಸರಾಗಿರುವ ಪಾಕಿಸ್ತಾನದ ಉಸ್ಮಾನ್ ತಾರಿಕ್, ಭಾರತದ ಪಾಲಿಗೆ ಪ್ರಮುಖ ಸವಾಲಾಗುವ ಸಾಧ್ಯತೆಗಳಿವೆ.
ಭಾರತ ತಂಡದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಆರಂಭಿಕ ಆಟಗಾರ್ ಅಭಿಷೇಕ್ ಶರ್ಮ ಹೆಚ್ಚಿನ ಭರವಸೆಯನ್ನು ಇಟ್ಟುಕೊಂಡಿದೆ.
ಪಂದ್ಯ ಇಂದು ಸಂಜೆ 7 ಗಂಟೆಗೆ ನಡೆಯಲಿದೆ.
