ನವದೆಹಲಿ: ರಾಜ್ಯದಲ್ಲಿ 40 ಸಾವಿರ ನೇಮಕಾತಿಗಳಾಗಿವೆ ಎನ್ನುವ ಕಾಂಗ್ರೆಸ್ ಸರ್ಕಾರ ಅದರ ವಿವರವನ್ನೇಕೆ ನೀಡುತ್ತಿಲ್ಲ? ಮೊದಲು ಅದನ್ನು ಜನರ ಎದುರಿಡಲಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಈ ಸರ್ಕಾರ ಅದೆಷ್ಟು ಜನರಿಗೆ ನೇಮಕಾತಿ ಪತ್ರ ನೀಡಿದೆ? ಕಾನೂನು ಅಡೆತಡೆ ಮತ್ತು ಹಿಂದಿನ ಸರ್ಕಾರದ ನೆಪ ಹೇಳಿ ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ತರಾಟೆಗೆ ತೆಗೆದುಕೊಂಡಿರುವ ಸಚಿವರು, ಸರ್ಕಾರ ಇಲ್ಲಸಲ್ಲದ ಸಬೂಬು ಹೇಳೋದನ್ನು ಬಿಟ್ಟು ಪ್ರಸ್ತುತ ಸಮಸ್ಯೆ ಬಗೆಹರಿಸುವತ್ತ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.
ವಾಗ್ದಾನ ಅಲ್ಲ; ನೇಮಕಾತಿ ಆದೇಶ ಬೇಕು;
ಕಾಂಗ್ರೆಸ್ ಸರ್ಕಾರದಿಂದ ಯುವಕರಿಗೆ ಬೇಕಿರುವುದು ಉದ್ಯೋಗದ ‘ವಾಗ್ದಾನ’ವಲ್ಲ, ನೇಮಕಾತಿ ಆದೇಶ. ರಾಜ್ಯ ಸರ್ಕಾರ ಮೊದಲು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ. ಯುವ ಜನರ ಬೇಡಿಕೆಗಳನ್ನು ಆಲಿಸಲಿ ಎಂದು ಒತ್ತಾಯಿಸಿದ್ದಾರೆ.
ಯುವ ಜನರ ಉದ್ಯೋಗ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರದ ಬಳಿ ಹಣಕಾಸಿನ ಕೊರತೆಯಿದೆ. ಇದು ಸರ್ಕಾರದ ಆಡಳಿತಾತ್ಮಕ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿರುವ ಪ್ರಹ್ಲಾದ ಜೋಶಿ, ಕಳೆದ ಮೂರು ವರ್ಷದಲ್ಲಿ ಸರ್ಕಾರ ಯುವಕರಿಗಾಗಿ ಕೈಗೊಂಡ ಕ್ರಮಗಳನ್ನು ಜನರ ಮುಂದಿಡಲಿ ಎಂದು ಆಗ್ರಹಿಸಿದ್ದಾರೆ.
