ಬೆಂಗಳೂರು: ನಗರವನ್ನು ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಾಗೂ ನಾಗರಿಕರಲ್ಲಿ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ನಗರ ಪಾಲಿಕೆಯ ಆಯುಕ್ತರಾದ ಶ್ರೀ ಪೊಮ್ಮಲ ಸುನೀಲ್ ಕುಮಾರ್ ರವರ ಮಾರ್ಗದರ್ಶನದಲ್ಲಿ ನಗರ ಪಾಲಿಕೆಯ 7 ವಿಭಾಗಗಳಲ್ಲಿ ಮಾರ್ಚ್ 1 ರಿಂದ ಒಂದು ವಾರದ ಕಾಲ “ಸುಂದರ ನಗರ ಪಾಲಿಕೆಗಾಗಿ ಸಾಮೂಹಿಕ ಮಹಾ ಸ್ವಚ್ಛತಾ ಅಭಿಯಾನ”ವನ್ನು ಏರ್ಪಡಿಸಲಾಗಿದೆ.
*5ನೇ ದಿನವಾದ ಇಂದು ಬೆಳಗ್ಗೆಯಿಂದ 2 ಗಂಟೆಗಳ ಕಾಲ ಒಟ್ಟು 2,839 ಮಂದಿ (RWAs, ಸಾರ್ವಜನಿಕರು ಹಾಗೂ ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳ) ಸಹಯೋಗದೊಂದಿಗೆ ಎಲ್ಲಾ ವಾರ್ಡ್ ಗಳಲ್ಲಿ ಪಾದಚಾರಿ ನಡಿಗೆ ಕಾರ್ಯಕ್ರಮ ಏರ್ಪಡಿಸುವ ಮೂಲಕ ಒಟ್ಟು 72.68 ಕಿ.ಮೀ ನಡಿಗೆ ಪೂರ್ಣ ಗೊಳಿಸಲಾಗಿದೆ.
ದಾಸರಹಳ್ಳಿ ವಿಭಾಗದ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ನಗರ ಪಾಲಿಕೆ ಆಯುಕ್ತರವರ ನೇತೃತ್ವದಲ್ಲಿ ಅರುಣ್ ಪೈ ರವರ ಉಪಸ್ಥಿತಿಯಲ್ಲಿ ಜಂಟಿ ಆಯುಕ್ತರಾದ ಶ್ರೀಮತಿ ಪಲ್ಲವಿ ಹಾಗೂ AGM, ಲೋಹಿತ್ ಹಾಗೂ ಸಪ್ತಗಿರಿ ಮತ್ತು ಧನ್ವಂತರಿ ಕಾಲೇಜಿನ ಸುಮಾರು 150 ವಿದ್ಯಾರ್ಥಿಗಳೊಂದಿಗೆ
50 ಜನ ವಿವಿಧ ವಯೋಮಾನದ ಸಾರ್ವಜನಿಕರು ಸೇರಿ ಒಟ್ಟು 200 ರಿಂದ 250 ಜನ ಸುಮಾರು 4 ಕಿ.ಮೀ. ಪಾದಚಾರಿ ಮಾರ್ಗದಲ್ಲಿ ನಡೆದರು.
ಇದೇ ವೇಳೆ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಿಭಾಗಗಳಲ್ಲಿ ವ್ಯಾಪಕ ಪಾದಚಾರಿ ನಡಿಗೆಯನ್ನು ಕೈಗೊಳ್ಳಲಾಯಿತು. ಈ ಅಭಿಯಾನದಲ್ಲಿ ನಿಗದಿತ ಮಾರ್ಗದಲ್ಲಿ ನಾಗರಿಕರು ಪಾದಚಾರಿ ಮಾರ್ಗದಲ್ಲಿ ನಡೆದು ಪ್ರಮುಖ ಅಡೆತಡೆಗಳನ್ನು ಗುರುತಿಸುವುದು. ಪಾದಚಾರಿ ಮಾರ್ಗದಿಂದ ರಸ್ತೆ ಮೇಲೆ ಇಳಿಯುವಂತೆ ಮಾಡುವ ಅಡೆತಡೆಗಳನ್ನು ದಾಖಲಿಸಿ ಫೋಟೋ ತೆಗೆದುಕೊಳ್ಳುವಂತೆ ಭಾಗವಹಿಸಿದವರಿಗೆ ಸೂಚಿಸಲಾಯಿತು.
ಒಟ್ಟು 7 ವಿಭಾಗಗಳಿಂದ 131 ಸಣ್ಣ ಅಡೆತಡೆಗಳು ಕಂಡುಬಂದಿದ್ದು , ಉಳಿದಂತೆ ಪಾದಚಾರಿ ಮಾರ್ಗಗಳು ಸ್ವಚ್ಛ, ಹಸಿರಿನಿಂದ ಕೂಡಿದ್ದು ಸುಗಮವಾಗಿ ನಡೆಯಲು ಅನುಕೂಲಕರವಾಗಿವೆ ಎಂದು ಭಾಗವಹಿಸಿದವರು ಅಭಿಪ್ರಾಯಪಟ್ಟರು.
ಸಾಧನೆಯ ಮೈಲಿಗಲ್ಲು:
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ 112.68 ಕಿ.ಮೀ. ಪಾದಚಾರಿ ನಡಿಗೆ ಪೂರ್ಣ
ಇಲ್ಲಿಯವರೆಗೆ ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿಯೇ ಇದುವರೆಗೂ 40 ಕಿ .ಮೀ. ಪೂರ್ಣಗೊಂಡಿದ್ದು, ಈ ದಿನದ ಪಾದಚಾರಿ ನಡಿಗೆ 72.68 ಕಿ.ಮೀ. ಸೇರಿ ಒಟ್ಟಾರೆ ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ 112.68 ಫುಟ್‌ಪಾತ್ ವಾಕ್ ಪೂರ್ಣಗೊಂಡಿದೆ.
ಪಾದಚಾರಿ ನಡಿಗೆ ಉದ್ದೇಶ
ಪ್ರಾಜೆಕ್ಟ್ ವಾಕಲೂರು ಜಿಬಿಎ ಮತ್ತು ನಾಗರಿಕರ ಸಂಯುಕ್ತ ಪ್ರಯತ್ನವಾಗಿದ್ದು, ಬೆಂಗಳೂರು ನಗರದಲ್ಲಿ ನಡೆಯಲು ಯೋಗ್ಯ ಪಾದಚಾರಿ ಮಾರ್ಗಗಳನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ.
ಬೆಂಗಳೂರು ಅನ್ನು ವಾಕಲೂರು ಆಗಿಸೋಣ
ಪ್ರಾಜೆಕ್ಟ್ ವಾಕಲೂರು ಸಂಯೋಜಕ ಅರುಣ್ ಪೈ ಅವರು ಮಾತನಾಡಿ, ನಗರ ಪಾಲಿಕೆ ಅಧಿಕಾರಿಗಳು ನಾಗರಿಕರನ್ನು ತಮ್ಮ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಲು ಆಹ್ವಾನಿಸುವುದು ಮೂಲಸೌಕರ್ಯದ ಮೇಲೆ ಅವರ ವಿಶ್ವಾಸ ಹಾಗೂ ನಾಗರಿಕರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವ ಮನೋಭಾವವನ್ನು ತೋರಿಸುತ್ತದೆ. ಈ ಕಾರ್ಯಕ್ರಮ ನಗರ ಪಾಲಿಕೆ ಮತ್ತು ನಾಗರಿಕರನ್ನು ಇನ್ನಷ್ಟು ಹತ್ತಿರ ತರಲು ಸಹಾಯ ಮಾಡಿದ್ದು, ಇಂತಹ ಮೊದಲ ಹತ್ತು ಕಾರ್ಯಕ್ರಮಗಳು ನಗರದ ಇನ್ನಷ್ಟು ಪ್ರದೇಶಗಳಲ್ಲಿ ಇದೇ ರೀತಿಯ ವಾಕ್‌ಗಳು ನಡೆಯುವಂತೆ ಪ್ರೋತ್ಸಾಹಿಸಿದೆ.
