ಸಮಗ್ರ ಸುದ್ದಿ

ಸಮಗ್ರ ಅಭಿವೃದ್ಧಿಗೆ ಪೂರಕವಾದ ಪ್ರಗತಿಪರ ಬಜೆಟ್ – ಸಚಿವ ಜಮೀರ್ ಅಹಮದ್ ಖಾನ್

Share

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಆಶಯದೊಂದಿಗೆ ಎಲ್ಲರ ಹಿತ ಕಾಯುವ ಬಜೆಟ್ ಇದಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಬಜೆಟ್ ಕುರಿತು ಹೇಳಿಕೆ ನೀಡಿರುವ ಅವರು, ಸಿದ್ದರಾಮಯ್ಯ ಅವರ ಅಪಾರ ಅನುಭವ ಹಾಗೂ ಅಭಿವೃದ್ಧಿ ಪರ ಬದ್ಧತೆಗೆ ಬಜೆಟ್ ಸಾಕ್ಷಿಯಾಗಿದೆ.

ಕೃಷಿ, ಗ್ರಾಮೀಣಭಿವೃದ್ಧಿ, ಕೈಗಾರಿಕೆ, ಅರೋಗ್ಯ, ಶಿಕ್ಷಣ, ಪ್ರವಾಸೋಧ್ಯಮ ಸೇರಿದಂತೆ ಎಲ್ಲ ವಲಯದ ಅಭಿವೃದ್ಧಿ ಗೆ ಬಜೆಟ್ ನಲ್ಲಿ ಒತ್ತು ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣ ಕ್ಕೆ ಬಜೆಟ್ ನಲ್ಲಿ ಒತ್ತು ಕೊಡಲಾಗಿದೆ. ಬಡವರು ಮನೆ ಕಟ್ಟಿಕೊಳ್ಳಲು ನಿಗದಿಪಡಿಸಿದ್ದ ಮೊತ್ತ ಹೆಚ್ಚಿಸಿರುವುದು ಸ್ವಾಗತಾರ್ಹ. ಗೃಹಮಂಡಳಿ ವತಿಯಿಂದ 50 ಸಾವಿರ ನಿವೇಶನ ರಿಯಾಯಿತಿ ದರದಲ್ಲಿ ಕೊಡುವ ಘೋಷಣೆ ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರು ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. 4.47 ಲಕ್ಷ ಕೋಟಿ ರೂ. ಬಜೆಟ್ ನಲ್ಲಿ ನಮ್ಮ ಇಲಾಖೆಗೆ ಕೊಟ್ಟಿರುವುದು 4,600 ಕೋಟಿ ರೂ. ಮಾತ್ರ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಎಂದರೆ ಕೇವಲ ಮುಸ್ಲಿಂ ಸಮುದಾಯದ ಅಭಿವೃದ್ಧಿ ಅಲ್ಲ, ಕ್ರಿಶ್ಚಿಯನ್, ಬೌದ್ಧರು,ಜೈನ, ಸಿಖ್, ಪಾರ್ಸಿ ಇಲಎಲ್ಲ ಅಲ್ಪಸಂಖ್ಯಾತರು ಸೇರುತ್ತಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.


Share

You cannot copy content of this page