ಸಮಗ್ರ ಸುದ್ದಿ

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರಿನ ಸಂಗ್ರಹ: ರೈತರಿಗೆ ಆಶಾದಾಯಕ ಜಲ ಭದ್ರತೆ: ಸಚಿವ ಎನ್‌ ಎಸ್‌ ಭೋಸರಾಜು

Share

ಬೆಂಗಳೂರು : ರಾಜ್ಯದಾದ್ಯಂತ ಇರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದ್ದು, ಇಲಾಖೆಯ ವ್ಯಾಪ್ತಿಯಲ್ಲಿರುವ 𝟯,𝟳𝟴𝟴 ಕೆರೆಗಳ ಮೂಲಕ ಸುಮಾರು 𝟰,𝟰𝟱,𝟬𝟬𝟵 ಹೆಕ್ಟೇರ್‌ಗಳಷ್ಟು ಬೃಹತ್ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ (𝗖𝗼𝗺𝗺𝗮𝗻𝗱 𝗔𝗿𝗲𝗮) ಜೀವಜಲ ಒದಗಿಸುತ್ತಿವೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಇಲಾಖೆಯು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿರುವ ಒಟ್ಟು 𝟯,𝟳𝟴𝟴 ಸಣ್ಣ ನೀರಾವರಿ ಕೆರೆಗಳ ಪೈಕಿ ಬಹುಪಾಲು ಕೆರೆಗಳು ಈಗಲೂ ಉತ್ತಮ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ವಿವರಿಸಿರುವ ವರದಿಯ ಪ್ರಕಾರ, ಬೇಸಿಗೆಯಲ್ಲೂ ರಾಜ್ಯದ 𝟭𝟲𝟱 ಕೆರೆಗಳು ಭರ್ತಿಯಾಗಿಯೇ. ಇದಲ್ಲದೆ, 𝟭,𝟯𝟱𝟱 ಕೆರೆಗಳು ಸುಮಾರು ಶೇ. 𝟱𝟭 ಕ್ಕೂ ಹೆಚ್ಚು. ಹಾಗೆಯೇ 𝟭,𝟭𝟰𝟯 ಕೆರೆಗಳು ಸುಮಾರು ಶೇ. 𝟱𝟬 ರವರೆಗೆ ನೀರಿನ ಮಟ್ಟವನ್ನು ಕಾಯ್ದುಕೊಂಡಿವೆ. 𝟵𝟱𝟵 ಕೆರೆಗಳಲ್ಲಿ ಸುಮಾರು ಶೇ. 𝟯𝟬 ರಷ್ಟು ಸಾಮರ್ಥ್ಯದ ಸಂಗ್ರಹವಾಗಿದೆ.

ಜಿಲ್ಲಾವಾರು ಸಾಧನೆಯನ್ನು ವಿಶ್ಲೇಷಿಸುವುದಾದರೆ, ದಾವಣಗೆರೆ ಜಿಲ್ಲೆಯು ಅತ್ಯುತ್ತಮ ನೀರಿನ ಸಂಗ್ರಹದೊಂದಿಗೆ ರಾಜ್ಯದಲ್ಲೇ ಮುಂಚೂಣಿಲ್ಲಿದ್ದು, ಬೇಸಿಗೆಯಲ್ಲೂ ಜಿಲ್ಲೆಯ 𝟮𝟳 ಕೆರೆಗಳು ಭರ್ತಿಯಾಗಿವೆ. ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ 𝟰𝟲 ಕೆರೆಗಳು ಭರ್ತಿಯಾಗಿದ್ದು ಅತ್ಯುತ್ತಮ ಜಲ ಸಂಗ್ರಹವನ್ನು ಕಾಯ್ದುಕೊಂಡಿವೆ. ಇತರ ಉತ್ತಮ ಸಾಧನೆ ತೋರಿದ ಜಿಲ್ಲೆಗಳಲ್ಲಿ ಹಾಸನ, ತುಮಕೂರು, ಮತ್ತು ಕೋಲಾರ ಸೇರಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಅವರು, ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ 145 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳ ಮೂಲಕ 1073 ಕೆರೆಗಳನ್ನು ತುಂಬಿಸಲಾಗುತ್ತಿದೆ. ಉತ್ತಮ ಮುಂಗಾರು ಮಳೆ ಹಾಗೂ ಸರ್ಕಾರದ ಜಲ ನಿರ್ವಹಣಾ ಕಾರ್ಯತಂತ್ರಗಳು ಈ ಉತ್ತಮ ನೀರಿನ ಮಟ್ಟಕ್ಕೆ ಕಾರಣವಾಗಿದೆ ಎಂದು ಬಣ್ಣಿಸಿದ್ದಾರೆ.

“ಮಾರ್ಚ್ ಅಂತ್ಯದ ವೇಳೆಗೆ ನಮ್ಮ ಸಣ್ಣ ನೀರಾವರಿ ಕೆರೆಗಳಾದ್ಯಂತ ಇಷ್ಟೊಂದು ಪ್ರಮಾಣದ ನೀರು ಯಶಸ್ವಿಯಾಗಿ ಸಂಗ್ರಹವಾಗಿರುವುದು ಹಾಗೂ ಬೇಸಿಗೆಯಲ್ಲೂ ಬತ್ತದೆ ಉಳಿದುಕೊಂಡಿರುವುದು ಅತ್ಯಂತ ಪ್ರೋತ್ಸಾಹದಾಯಕ ವಿಚಾರ. 𝟭,𝟯𝟱𝟱 ಕೆರೆಗಳು ಬಹುಪಾಲು ತುಂಬಿರುವುದು ಮತ್ತು 𝟭𝟲𝟱 ಕೆರೆಗಳು ಭರ್ತಿಯಾಗಿರುವುದು ನಮ್ಮ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಕಾರ್ಯಕ್ರಮಗಳು ಹಾಗೂ ಕೆರೆಗಳ ಪುನರುಜ್ಜೀವನ ಯೋಜನೆಗಳ ಯಶಸ್ಸಿಗೆ ಸಾಕ್ಷಿಯಾಗಿದೆ,” ಎಂದು ಸಚಿವ ಎನ್.ಎಸ್. ಬೋಸರಾಜು ವಿವರಿಸಿದ್ದಾರೆ.

“ಈ ಕೆರೆಗಳಿಗೆ ಏತ ನೀರಾವರಿ ಯೋಜನೆಗಳ (ಸಣ್ಣ ನೀರಾವರಿ ಹಾಗೂ ಇತರೆ ಇಲಾಖೆಯಗಳ ಯೋಜನೆ) ಮೂಲಕ ಶುದ್ದ ನೀರು ಹಾಗೂ ಬಯಲು ಸೀಮೆಯ ಜಿಲ್ಲೆಗಳಲ್ಲಿ ಸಂಸ್ಕರಿಸಿದ ಮತ್ತು ಮೇಲ್ಮೈ ನೀರಿನ ನಿರಂತರ ಹರಿವನ್ನು ಖಚಿತಪಡಿಸುವ ಮೂಲಕ, ಬೇಸಿಗೆಯ ತಿಂಗಳುಗಳಲ್ಲಿ ಅವು ಬತ್ತಿಹೋಗದಂತೆ ಕ್ರಮಗಳನ್ನು ಕೈಗೊಂಡಿದ್ದೇವೆ. ಜಲ-ಸುರಕ್ಷಿತ ಕರ್ನಾಟಕವನ್ನು ನಿರ್ಮಿಸುವ ನಮ್ಮ ಸಮಗ್ರ ಪ್ರಯತ್ನಗಳು ತಳಮಟ್ಟದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ನೀಡುತ್ತಿವೆ ಎನ್ನುವುದನ್ನು ಈ ದತ್ತಾಂಶಗಳು ಪುಷ್ಟೀಕರಿಸುತ್ತವೆ. ಕೆರೆಗಳಲ್ಲಿ ಈಗಲೂ ಉಳಿದುಕೊಂಡಿರುವ ಈ ಜಲಸಂಪತ್ತು ನಮ್ಮ 𝟰.𝟰𝟱 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ರೈತರಿಗೆ ನೇರ ಪ್ರಯೋಜನವನ್ನು ತಂದುಕೊಡಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಅಂಕಿ-ಅಂಶಗಳು:

•ರಾಜ್ಯದಲ್ಲಿರುವ ಒಟ್ಟು ಸಣ್ಣ ನೀರಾವರಿ ಕೆರೆಗಳು: 𝟯,𝟳𝟴𝟴
•ಕೆರೆಗಳಲ್ಲಿರುವ ಒಟ್ಟು ನೀರಿನ ಸಂಗ್ರಹ: ಸುಮಾರು 𝟱𝟬.𝟵𝟳 𝗧𝗠𝗖
•ಸಂಪೂರ್ಣ ಭರ್ತಿಯಾಗಿರುವ ಕೆರೆಗಳು: ಸುಮಾರು 𝟭𝟲𝟱
•ಸುಮಾರು ಶೇ. 𝟱𝟭 ಕ್ಕೂ ಹೆಚ್ಚು ಭರ್ತಿಯಾಗಿರುವ ಕೆರೆಗಳು: 𝟭,𝟯𝟱𝟱
•ಪ್ರಯೋಜನ ಪಡೆಯುತ್ತಿರುವ ಒಟ್ಟು ಅಚ್ಚುಕಟ್ಟು ಪ್ರದೇಶ: 𝟰,𝟰𝟱,𝟬𝟬𝟵 ಹೆಕ್ಟೇರ್


Share

You cannot copy content of this page