ಸಮಗ್ರ ಸುದ್ದಿ

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪುರಸ್ಕಾರ| ಮಹಾಸಭಾದಿಂದ ತಾಲೂಕಿಗೊಂದು ವಿದ್ಯಾರ್ಥಿ ನಿಲಯ ನಿರ್ಮಾಣ: ಈಶ್ವರ ಖಂಡ್ರೆ

Share

ಬೇಲೂರು: ವೀರಶೈವ ಲಿಂಗಾಯತರಲ್ಲೂ ಬಡವರಿದ್ದು, ಸಮಾಜದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ತಾಲೂಕಿಗೊಂದು ವಿದ್ಯಾರ್ಥಿ ನಿಲಯ ನಿರ್ಮಾಣ ಮಹಾಸಭಾದ ಗುರಿಯಾಗಿದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೇಲೂರಿನಲ್ಲಿಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಪ್ರತಿಭಾವಂತ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅನುವಾಗುವಂತೆ ತರಬೇತಿ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಹಲವು ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ನಿರ್ಮಿಸಲಾಗಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು 1 ಕೋಟಿ ರೂ. ಮೀಸಲಿಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

“25 ಕೋಟಿ ರೂ. ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ಸ್ಮಾರಕ: ಈಶ್ವರ ಖಂಡ್ರೆ*

ಆನೆಧಾಮ ನಿರ್ಮಾಣಕ್ಕೆ ಸಂಪುಟದ ಸಮ್ಮತಿ: ಈಶ್ವರ ಖಂಡ್ರೆ
ಬೇಲೂರು, ಮೇ 8: ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಪ್ರಕೃತಿ ಪರಿಸರದ ಮೇಲೆ ಪ್ರೀತಿ ಹೊಂದಿದ್ದರು. ಅವರ ಹೆಸರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, ಇದಕ್ಕೆ ಬೆಂಬಲ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಬೇಲೂರಿನಲ್ಲಿಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯಿಂದ ಬೇಲೂರು ತಾಲೂಕು ಹಳೇಬೀಡು ಯುನೆಸ್ಕೋ ತಾಣದಲ್ಲಿರುವ 10 ಎಕರೆ ಜಮೀನಿನಲ್ಲಿ ಸ್ಮಾರಕ ನಿರ್ಮಿಸಲು ಯೋಜಿಸಿದ್ದು, ಇದಕ್ಕೆ ಇಲಾಖೆಯ ವತಿಯಿಂದ ಬೆಂಬಲ ನೀಡುವುದಾಗಿ ತಿಳಿಸಿದರು.

ಆನೆ ಸಮಸ್ಯೆ ಪರಿಹಾರಕ್ಕೆ ಆನೆಧಾಮ ನಿರ್ಮಾಣ: ಈಶ್ವರ ಖಂಡ್ರೆ

ಬೇಲೂರು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಕಾಡಾನೆ ಸಮಸ್ಯೆ ಇದ್ದು, ನೂರಾರು ಆನೆಗಳು ಕಾಡಿನಿಂದ ಹೊರಗೆ ಇವೆ. ಇಂತಹ ಆನೆಗಳಿಂದ ಆಗುವ ಬೆಳೆಹಾನಿ, ಜೀವ ಹಾನಿ ತಪ್ಪಿಸಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದ್ದು, ಆನೆ ಧಾಮ ಸ್ಥಾಪನೆಗೆ ಈಗಾಗಲೇ 2 ಸಾವಿರ ಎಕರೆ ಭೂಮಿ ಗುರುತಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದರು.

ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಮಾಹಿತಿ ನೀಡಲು ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಇಲಾಖೆ ಸಿಬ್ಬಂದಿ ಆನೆ ಸಂಚಾರದ ಬಗ್ಗೆ ಕಾಲ ಕಾಲಕ್ಕೆ ನೀಡುವ ಎಚ್ಚರಿಕೆ ಪಾಲಿಸಿದರೆ ಅಮೂಲ್ಯ ಜೀವಹಾನಿ ತಪ್ಪಿಸಬಹುದು ಎಂದರು.

ಮಾರುತಗಳನ್ನು ತಡೆದು ವ್ಯಾಪಕ ಮಳೆ ಸುರಿಸುವಂತೆ ಮಾಡುವ, ನೂರಾರು ನದಿಗಳಿಗೆ ಮೂಲವಾದ ಪಶ್ಚಿಮಘಟ್ಟ ಇರುವ ಕರ್ನಾಟಕದಲ್ಲಿ ಹಚ್ಚ ಹಸಿರಿನ ಅರಣ್ಯವಿದ್ದು, ವನ ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆಯಾಗಿದೆ. ಹೀಗಾಗಿ ಕಾಡಿನಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.


Share

You cannot copy content of this page