ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳಲ್ಲಿ ರಾಜ್ಯ ಸರ್ಕಾರದ *6ನೇ ಗ್ಯಾರಂಟಿ *“ಭೂ ಗ್ಯಾರಂಟಿ” ಯೋಜನೆಯಡಿ* ಆರಂಭಿಸಿರುವ “ನನ್ನ ಇ-ಖಾತಾ ನನ್ನ ಹಕ್ಕು” ಅಭಿಯಾನದಲ್ಲಿ 2,939 ಅರ್ಜಿಗಳ ಸ್ವೀಕಾರದ ಪೈಕಿ ಸ್ಥಳದಲ್ಲೇ 1,242 ಅರ್ಜಿಗಳ ವಿಲೇವಾರಿ ಮಾಡಲಾಗಿದೆ.
ಇ-ಖಾತಾ, ಮ್ಯುಟೆಷನ್, ಹೊಸ ಇ-ಖಾತಾ, ಬಿ ಟು ಎ ಖಾತಾ ಹಾಗೂ ದೂರುಗಳ ಅರ್ಜಿಗಳು ಸೇರಿದಂಗೆ ಒಟ್ಟಾರೆ 2,939 ಅರ್ಜಿಗಳ ಸ್ವೀಕರಿಸಲಾಯಿತು. ಈ ಪೈಕಿ ಸ್ಥಳದಲ್ಲಿಯೇ 1,242 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಿ ಅಂತಿಮ ಇ-ಖಾತಾ ನೀಡಲಾಗಿದೆ. ಬಾಕಿಯಿರುವ 1,697 ಅರ್ಜಿಗಳನ್ನು ಕಾಲಮಿತಿಯೊಳಗಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗುವುದು.
ಇ-ಖಾತಾ ಅರ್ಜಿಗಳು
ಒಟ್ಟು 1,080 ಅರ್ಜಿಗಳಲ್ಲಿ 568 ವಿಲೇವಾರಿಯಾಗಿವೆ. 512 ಅರ್ಜಿಗಳು ಬಾಕಿಯಿವೆ.
ಮ್ಯುಟೆಷನ್ ಅರ್ಜಿಗಳು:
ಒಟ್ಟು 139 ಮ್ಯುಟೇಷನ್ ಅರ್ಜಿಗಳಲ್ಲಿ 64 ವಿಲೇವಾರಿ ಯಾಗಿದ್ದು, 75 ಬಾಕಿ ಉಳಿದಿವೆ.
ಹೊಸ ಖಾತಾ ಅರ್ಜಿಗಳು:
ಒಟ್ಟು 236 ಅರ್ಜಿಗಳಲ್ಲಿ 90 ಅರ್ಜಿಗಳು ವಿಲೇವಾರಿ ಯಾಗಿವೆ. 146 ಅರ್ಜಿಗಳು ಬಾಕಿ ಉಳಿದಿವೆ.
ಬಿ ಟು ಎ ಖಾತಾ ಅರ್ಜಿಗಳು:
ಒಟ್ಟು 425 ಅರ್ಜಿಗಳಲ್ಲಿ 120 ವಿಲೇವಾರಿ ಯಾಗಿದ್ದು, 305 ಅರ್ಜಿಗಳು ಬಾಕಿಯಿವೆ.
ದೂರುಗಳ ಅರ್ಜಿಗಳು:
ಒಟ್ಟು1,059 ದೂರುಗಳ ಅರ್ಜಿಗಳು ಸ್ವೀಕೃತವಾಗಿದ್ದು,
400 ವಿಲೇವಾರಿಯಾಗಿವೆ. 659 ಅರ್ಜಿಗಳು ಬಾಕಿ ಉಳಿದಿವೆ.
