ದೇವನಹಳ್ಳಿ:ಕೇಂದ್ರ ಸರ್ಕಾರದ ಯೋಜನೆಯಡಿ ಪ್ರತಿ ಫಲಾನುಭವಿಗೆ ತಲಾ 5 ಕೆ.ಜಿ. ಅಕ್ಕಿ ನೀಡಲಾಗುತ್ತಿದ್ದು. ಅದರ ಜೊತೆಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ರಾಗಿ ಮತ್ತು ಅಕ್ಕಿಯನ್ನು ವಿತರಿಸುತ್ತಿದೆ. ಪ್ರಸ್ತುತ 6 ಕೆ.ಜಿ. ರಾಗಿ ಮತ್ತು 4 ಕೆ.ಜಿ. ಅಕ್ಕಿಯನ್ನು ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ.
ರಾಗಿ ವಿತರಣೆಯಲ್ಲಿನ ವಿಳಂಬಕ್ಕೆ ಸಂಬಂಧಿಸಿದಂತೆ ಸಚಿವರು ಸ್ಪಷ್ಟನೆ ನೀಡಿದ್ದು, ವಾಸ್ತವವಾಗಿ ಅಕ್ಟೋಬರ್‌ನಿಂದ ರಾಗಿ ವಿತರಣೆಯನ್ನು ಆರಂಭಿಸಲು ಯೋಜಿಸಲಾಗಿತ್ತು. ಆದರೆ, ನಮ್ಮಲ್ಲಿ ರಾಗಿಯ ದಾಸ್ತಾನು ಹೆಚ್ಚಾಗಿರುವುದರಿಂದ, ಅದನ್ನೇ ಮುಂಚಿತವಾಗಿ ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ವಿತರಣೆ ಆರಂಭಿಸಲಾಯಿತು.
ಈ ಪ್ರಕ್ರಿಯೆಯಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ರಾಗಿಯನ್ನು ಸ್ವಚ್ಛಗೊಳಿಸಿ, ಸರಿಯಾಗಿ ಬ್ಯಾಗಿಂಗ್ ಮಾಡಿ ವಿತರಿಸುವಲ್ಲಿ ಸ್ವಲ್ಪ ತಡವಾಗಿದೆ. ಆದರೂ, ಫಲಾನುಭವಿಗಳಿಗೆ ಯಾವುದೇ ತಿಂಗಳ ಪಡಿತರ ತಪ್ಪುವುದಿಲ್ಲ. ಬಾಕಿ ಇರುವ ಪಡಿತರವನ್ನು ಆಯಾ ತಿಂಗಳುಗಳಿಗೆ ಸೇರಿಸಿ ಸಂಪೂರ್ಣವಾಗಿ ವಿತರಿಸಲಾಗುವುದು
ಇಂದಿರಾ ಕಿಟ್ ಗೂ ಇದಕ್ಕೂ ಸಂಬಂಧವಿಲ್ಲ ಆಹಾರ ಧಾನ್ಯಗಳನ್ನು ಸರಿಯಾದ ಸಮಯಕ್ಕೆ ಗ್ರಾಹಕರಿಗೆ ತಲುಪಿಸಲಾಗುವುದು. ರಾಗಿಯನ್ನು ಶುಚಿ ಮಾಡುವಲ್ಲಿ ತಡವಾಗಿದ್ದು, ಸರಿಯಾದ ಕ್ರಮದಲ್ಲಿ ಬ್ಯಾಗಿಂಗ್ ಮಾಡಿ ವಿತರಣೆ ಮಾಡಲಾಗುವುದು ಎಂದರು.
