ಬೆಂಗಳೂರು, ಮೇ 26, ಕರ್ನಾಟಕ ವಾರ್ತೆ:
ಹವಾಮಾನ ಬದಲಾವಣೆ, ತ್ವರಿತ ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಜಾಗತಿಕ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಎದುರಿಸಲು ಹಾಗೂ ಭವಿಷ್ಯದ ಜಲ ನಿರ್ವಹಣೆ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಮೇ 27ರಂದು ಬೆಳಗ್ಗೆ 11 ಗಂಟೆಗೆ ದೇಶದ ಮೊಟ್ಟ ಮೊದಲ ಹಾಗೂ ಅತಿದೊಡ್ಡ “ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026” ಯನ್ನು ಬೆಂಗಳೂರು ನಗರದ ಮೇಖ್ರಿವೃತ್ತದ ಬಳಿಯ ಫೋರ್ ಸೀಸನ್ ಹೋಟೆಲ್‍ನಲ್ಲಿ ಏರ್ಪಡಿಸಲಾಗಿದೆ.
ಈ ಬೃಹತ್ ಶೃಂಗಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಭೈರತಿ ಸುರೇಶ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ತುμÁರ್ ಗಿರಿನಾಥ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಪರ ಕಾರ್ಯದರ್ಶಿ ಡಿ.ತಾರಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರರಾವ್, ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಉಪಸ್ಥಿತರಿರಲಿದ್ದಾರೆ.
ಈ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಐ ಆಧಾರಿತ ಜಲ ಆಡಳಿತ, ಸ್ಮಾರ್ಟ್ ಯುಟಿಲಿಟಿ, ಡಿಜಿಟಲ್ ಟ್ವಿನ್ಸ್, ಐಒಟಿ ಮೇಲ್ವಿಚಾರಣೆ, ತ್ಯಾಜ್ಯನೀರು ಮರುಬಳಕೆ, ಮುನ್ಸೂಚಕ ವಿಶ್ಲೇಷಣೆ ಹಾಗೂ ಭವಿಷ್ಯದ ಆರ್ಥಿಕ ಮಾದರಿಗಳ ಕುರಿತು ವಿಸ್ತøತ ಚರ್ಚೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.
