ಶಿಕ್ಷಣ / ಉದ್ಯೋಗ

ಕೆಪಿಎಸ್‍ಸಿ: ವಿವಿಧ ಇಲಾಖೆಗಳ ಗ್ರೂಪ್ ‘ಸಿ’ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಹಾಗೂ ಕಟ್-ಆಫ್ ಅಂಕ ಪ್ರಕಟ

Share

ಬೆಂಗಳೂರು:ಕರ್ನಾಟಕ ಲೋಕಸೇವಾ ಆಯೋಗವು ಪದವಿ ಪೂರ್ವ ಮಟ್ಟದ ವಿದ್ಯಾರ್ಹತೆಯ ವಿವಿಧ ಇಲಾಖೆಗಳಲ್ಲಿನ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ‘ಸಿ’ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್-ಆಫ್ ಅಂಕಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

ಆಯೋಗದ ಅಧಿಸೂಚನೆ ಸಂಖ್ಯೆ ಪಿಎಸ್‍ಸಿ 504 ಆರ್‍ಟಿಡಿ)(2)/2023-24/3495 ದಿನಾಂಕ: 15-03-2024 ರಲ್ಲಿ ಅಧಿಸೂಚಿಸಲಾಗಿದ್ದ ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಮಾಹಿತಿಗಾಗಿ ಆಗಸ್ಟ್ 11 ರಂದು ಫಲಿತಾಂಶವನ್ನು ಪ್ರಕಟಿಸಲಾಗಿದೆ.

ಅಂತರ್ಜಲ ನಿರ್ದೇಶನಾಲಯ: ಕಿರಿಯ ಇಂಜಿನಿಯರ್ – 05 ಹುದ್ದೆಗಳು, ಪೌರಾಡಳಿತ ನಿರ್ದೇಶನಾಲಯ (ನಗರ ಸಭೆ / ಪುರ ಸಭೆ / ಪಟ್ಟಣ ಪಂಚಾಯಿತಿ): ಕಿರಿಯ ಇಂಜಿನಿಯರ್ (ಸಿವಿಲ್) – 08 ಹುದ್ದೆಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ಕಿರಿಯ ಇಂಜಿನಿಯರ್ – 20 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಮತ್ತು ಕಟ್-ಆಫ್ ಅಂಕಗಳ ವಿವರಗಳನ್ನು ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದಾಗಿದೆ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page