ಕೋಲಾರ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯ, ಹೊಗಳಗೆರೆ ಹಾಗೂ ಹೊಳಲಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಕೋಲಾರದ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ‘ಸಸ್ಯ ಸಂತೆ – 2026’ ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಾಳೆ ಮತ್ತು ನಾಡಿದ್ದು ಎರಡು ದಿನಗಳ ಕಾಲ ಕೋಲಾರದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದ ಜಾಕ್ ಗಾರ್ಡನ್ ಆವರಣದಲ್ಲಿ ಆಯೋಜಿಸಲಾಗಿದೆ.
ಹಣ್ಣು ಹಾಗೂ ಸಸಿಗಳು, ವಿವಿಧ ತಳಿಯ ಹಣ್ಣಿನ ಬೆಳೆಗಳು, ಸಸಿ ಮತ್ತು ಕಸಿ ಗಿಡಗಳು, ಅಲಂಕಾರಿಕ ಮತ್ತು ಔಷಧೀಯ ಸಸ್ಯಗಳು, ಹೂ ಹಾಗೂ ಅಲಂಕಾರಿಕ ಸಸ್ಯಗಳು, ಔಷಧೀಯ ಮತ್ತು ಸುಗಂಧ ಸಸ್ಯಗಳ ಪ್ರದರ್ಶನ ಮತ್ತು ಮಾರಾಟ,
ಬೀಜಗಳ ಕಿಟ್‌ಗಳಾದ ತರಕಾರಿ ಬೀಜದ ಕಿಟ್, ಹೂ ಬೀಜದ ಕಿಟ್ ಮತ್ತು ಮೈಕ್ರೋ ಗ್ರೀನ್ ಬೀಜದ ಕಿಟ್‌ಗಳು, ತೋಟಗಾರಿಕೆ ಸಾಮಗ್ರಿಗಳಾದ ಆಧುನಿಕ ತೋಟಗಾರಿಕೆ ಉಪಕರಣಗಳು ಮತ್ತು ಹೂ ಕುಂಡ ಮಿಶ್ರಣ ಹಾಗೂ ಸಾವಯವ ಉತ್ಪನ್ನಗಳಾದ ಜೈವಿಕ ಉತ್ಪನ್ನಗಳು, ಸಾವಯವ ಗೊಬ್ಬರ, ಮೌಲ್ಯವರ್ಧಿತ ಹಾಗೂ ಸಂಸ್ಕರಿಸಿದ ಉತ್ಪನ್ನಗಳು ಸಸ್ಯ ಸಂತೆಯ ಪ್ರಮುಖ ಆಕರ್ಷಣೆಯಾಗಿವೆ.
ರೈತರು, ಸಾರ್ವಜನಿಕರು ಹಾಗೂ ತೋಟಗಾರಿಕಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ.ಪ್ರಕಾಶ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9480696384 / 9449651384 / 9148889314 / 8147572913 ಗೆ ಸಂಪರ್ಕಿಸಬಹುದು.
