ಸಮಗ್ರ ಸುದ್ದಿ

ಫ್ರಾನ್ಸ್ ಶಿಕ್ಷಣ ಸಚಿವರಿಗೆ ‘ಬಿದ್ರಿವೇರ್’ ಉಡುಗೊರೆ

Share

ನವದೆಹಲಿ: ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕದ ವಿಶಿಷ್ಟ ‘ಬಿದ್ರಿವೇರ್’ ಅನ್ನು ನೆನಪಿನ ಕಾಣಿಕೆಯಾಗಿ ನೀಡಿ ಕರುನಾಡಿನ ಬಿದ್ರಿ ಕಲೆಯ ಹಿರಿಮೆ ಹೆಚ್ಚಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಫ್ರಾನ್ಸ್‌ ದೇಶದ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಚಿವ ಫಿಲಿಪ್ ಬ್ಯಾಪ್ಟಿಸ್ಟ್ ಅವರನ್ನು ಆದರದಿಂದ ಸ್ವಾಗತಿಸಿದ ಜೋಶಿ ಅವರು, ಕೊನೆಗೆ ನೆನಪಿನ ಕಾಣಿಕೆಯಾಗಿ ‘ಬಿದ್ರಿ ವೇರ್’ ಕಲಾಕೃತಿ ನೀಡಿ ಶುಭ ಕೋರಿದರು.

ಫ್ರಾನ್ಸ್ ಶಿಕ್ಷಣ ಸಚಿವರಿಗೆ ಕರ್ನಾಟಕದ ಸಂಪ್ರದಾಯಿಕ ಈ ‘ಬಿದ್ರಿವೇರ್’ ಕಲೆ, ಕಲಾಕೃತಿ ವೈಶಿಷ್ಟ್ಯತೆ ಕುರಿತು ವಿಶ್ಲೇಷಣೆ ನೀಡಿ ಗಮನ ಸೆಳೆದರು. ‘ಬಿದ್ರಿ ವೇರ್’ ಗೆ 500 ವರ್ಷಗಳ ಸುದೀರ್ಘ ಇತಿಹಾಸವಿದ್ದು, ವಿಶಿಷ್ಠ ಕಲೆ, ಸಂಸ್ಕೃತಿಗೆ ಹೆಸರಾದ ನಮ್ಮ ಕರ್ನಾಟಕದ ಬೀದರ್‌ನ ಅಪರೂಪದ ಕಲಾಕೃತಿಯಾಗಿದೆ ಎನ್ನುತ್ತಲೇ ಫ್ರಾನ್ಸ್ ಶಿಕ್ಷಣ ಸಚಿವರು ಅಭಿಮಾನ ತೋರಿದರು.


Share

You cannot copy content of this page