ಸಮಗ್ರ ಸುದ್ದಿ

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ ಅಂಗೀಕಾರ

Share

ಬೆಳಗಾವಿ: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025ನ್ನು ವಿಧಾನ ಪರಿಷತ್‍ನಲ್ಲಿ ಅಂಗೀಕರಿಸಲಾಯಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ವಾಹನಗಳನ್ನು ನೋಂದಣಿ ಮಾಡುವ ಸಮಯದಲ್ಲಿ ಒಂದು ಬಾರಿಯ ಸೆಸ್ ಅನ್ನು ಹೆಚ್ಚಿನ ಮಿತಿಯಲ್ಲಿ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ಬಿಟ್ಟುಬಿಡುವುದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಅಧಿನಿಯಮ, 2017 (2017ರ ಕರ್ನಾಟಕ ಅಧಿನಿಯಮ ಸಂ. 45)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದ್ದು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗೀಕರಿಸುವಂತೆ ಕೋರಿದರು.

ವಿಧೇಯಕದ ಬಗ್ಗೆ ಸದಸ್ಯರಾದ ರವಿಕುಮಾರ್, ಗೋವಿಂದರಾಜು, ಡಿ.ಎಸ್.ಅರುಣ್, ಭೋಜೆಗೌಡ, ಭಾರತಿ ಶೆಟ್ಟಿ, ತಳವಾರ ಸಾಬಣ್ಣ, ಶರವಣ, ಸಿ.ಟಿ.ರವಿ ಮಾತನಾಡಿದರು. ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.


Share

You cannot copy content of this page