ಸಮಗ್ರ ಸುದ್ದಿ

ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಬೆಂಗಳೂರು ನಗರವನ್ನಾಗಿ ಬದಲಾಯಿಸಲು ನಾಗರೀಕರು ಕೈಜೋಡಿಸಿ: ರಾಜೇಂದ್ರ ಚೋಳನ್

Share

ಬೆಂಗಳೂರು:ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಬೆಂಗಳೂರು ನಗರವನ್ನಾಗಿ ಬದಲಾಯಿಸಲು ನಾಗರೀಕರ ಸಹಕಾರ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ಸಂಘ- ಸಂಸ್ಥೆಗಳು, ಎನ್.ಜಿ.ಓ ಗಳು, ಅಪಾರ್ಟ್ ಮೆಂಟ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಕೇಂದ್ರ ನಗರ ಪಾಲಿಕೆಯೊಂದಿಗೆ ಕೈಜೋಡಿಸಲು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್ ಮನವಿ ಮಾಡಿದ್ದಾರೆ.

ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಲಮೂಲಗಳ ಸಂರಕ್ಷಣೆ, ತ್ಯಾಜ್ಯ ವಿಂಗಡಣೆ ಹಾಗೂ ಸಮರ್ಪಕ ನಿರ್ವಹಣೆ, ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ಮರುಬಳಕೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಕುರಿತು ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಜನಜಾಗೃತಿಗಾಗಿ ಏರ್ಪಡಿಸಲಾಗಿದ್ದ “ಸಮುದಾಯ ಬೀದಿ ನಾಟಕ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಟಕ ವೀಕ್ಷಿಸಿ ಮಾತನಾಡಿದರು.

3 ಸ್ಥಳಗಳಲ್ಲಿ “ಸಮುದಾಯ ಬೀದಿ ನಾಟಕ”ಗಳ ಆಯೋಜನೆ

ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯ 3 ಸ್ಥಳಗಳಲ್ಲಿ “ಸಮುದಾಯ ಬೀದಿ ನಾಟಕ” ಗಳ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರು ಬೀದಿ ನಾಟಕ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

  1. ಚಿಕ್ಕಪೇಟೆ ಕ್ಷೇತ್ರದ ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ
  2. ಸಿ. ವಿ. ರಾಮನ್ ನಗರ ಕ್ಷೇತ್ರದ ಇಂದಿರಾನಗರದ ಕೆ.ಎಫ್. ಸಿ ಬಸ್ ನಿಲ್ದಾಣ ಹತ್ತಿರ ಹಾಗೂ
  3. ಶಾಂತಿನಗರ ಕ್ಷೇತ್ರದ ಚರ್ಚ್ ಸ್ಟ್ರೀಟ್ ನಲ್ಲಿ ಮೆಟ್ರೋ ನಿಲ್ದಾಣ ಹಿಂಭಾಗ

ಸಾರ್ವಜನಿಕರಿಂದ ತ್ಯಾಜ್ಯ ನಿರ್ವಹಣೆ, ನಗರದಲ್ಲಿ ಸ್ವಚ್ಛ ಹಾಗೂ ಸುಂದರತೆಗಾಗಿ ದೃಢ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧನೆ ಸ್ವೀಕಾರ ಮಾಡಿದರು.

3 ಸ್ಥಳಗಳಲ್ಲಿ ಆಯೋಜಿಸಲಾಗಿದ್ದ “ಸಮುದಾಯ ಬೀದಿ ನಾಟಕ” ವೀಕ್ಷಣೆ ಮಾಡಿದ ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ರಾಜೇಂದ್ರ ಚೋಳನ್ ರವರು ಸೇರಿದಂತೆ ಪಾಲ್ಗೊಂಡಿದ್ದ ಸಾರ್ವಜನಿಕರು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಬೆಂಗಳೂರು ನಗರವನ್ನಾಗಿ ಬದಲಾಯಿಸಲು, ಜಲ ಮೂಲಗಳ ಸಂರಕ್ಷಣೆ, ನೀರಿನ ಮಿತ ಬಳಕೆ, ಏಕಬಳಕೆ ಪ್ಲಾಸ್ಟಿಕ್ ನಿಷೇಧ, ತ್ಯಾಜ್ಯ ವಿಂಗಡಣೆ, ಸಮರ್ಪಕ ನಿರ್ವಹಣೆ, ನಮ್ಮ ಮನೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ “ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ನಗರ, ನಿರ್ಮಾಣಕ್ಕೆ ನಾವು ಬದಲಾಗೋಣ, ಬೆಂಗಳೂರು ಸ್ವಚ್ಛತೆಯೆಡೆಗೆ ಬದಲಾಯಿಸೋಣ” ಎಂಬ ದೃಢ ಸಂಕಲ್ಪದ ಬೋಧನೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಂದಾಯ ಅಪರ ಆಯುಕ್ತರಾದ ಕೆ. ರಂಗನಾಥ್, ಡಿಜಿಎಂ ಭೀಮೇಶ್ ನಾಯಕ್, ಎಜಿಎಂ ಗಳು, ಮಾರ್ಷಲ್ ಗಳು ಹಾಜರಿದ್ದರು.


Share

You cannot copy content of this page