ಸಮಗ್ರ ಸುದ್ದಿ

‘ನಮ್ಮೂರ ಹೆಮ್ಮೆ’ ಸಾಧಕ ವಿದ್ಯಾರ್ಥಿಗಳಿಗೆ ಪೌರ ಸನ್ಮಾನ ಕಾರ್ಯಕ್ರಮ: ಕೃಷ್ಣ ಬೈರೇಗೌಡ

Share

ಬೆಂಗಳೂರು:ಪ್ರತಿಭಾವಂತ ಯುವಕರು ನಮ್ಮೂರ ಹೆಮ್ಮೆ, ನಮ್ಮ ಸಮಾಜದ ಆಸ್ತಿ. ಹೀಗಾಗಿ ಜಿಬಿಎ ಮತ್ತು ಬೆಂಗಳೂರು ಜಿಲ್ಲಾ ಪಂಚಾಯತ್ ವತಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಮ್ಮೂರ ಹೆಮ್ಮೆ ಪೌರ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ‌ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಎಸ್ಎಸ್ಎಲ್ಸಿಯಲ್ಲಿ 621 ಅಥವಾ ಅದಕ್ಕಿಂತ ಹೆಚ್ಚು ಅಂಕಗಳು, ಪಿಯುಸಿಯಲ್ಲಿ 596 ಅಥವಾ ಹೆಚ್ಚು ಅಂಕಗಳು ಮತ್ತು ಸೆಂಟ್ರಲ್ ಸಿಲಬಸ್‌ನ 10 ಮತ್ತು 12 ನೇ ತರಗತಿಯಲ್ಲಿ 496 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರುವಂತಹ ವಿದ್ಯಾರ್ಥಿಗಳಿಗೆ ನಾವು ನಮ್ಮೂರ ಹೆಮ್ಮೆ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ.

ವಿದ್ಯಾರ್ಥಿಗಳು ಆಗಸ್ಟ್ 25ರ ಒಳಗಡೆ ದಯವಿಟ್ಟು ಅರ್ಜಿ ಸಲ್ಲಿಸಿ‌. ಆಗಸ್ಟ್ 29ನೇ ತಾರೀಕು ನಾವು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಿದ್ದೇವೆ.

ಶೈಕ್ಷಣಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡೋದು ನಮಗೆ ಒಂದು ಕಡೆ ಸಂತೋಷ ಆದರೆ ಅದರ ಜೊತೆಗೆ ಅಂತಹ ವಿದ್ಯಾರ್ಥಿಗಳ ಪರಿಶ್ರಮವನ್ನ ಗುರುತಿಸಿ ಅವರಿಗೆ ಗೌರವ ನೀಡೋದರ ಜೊತೆಗೆ ಸಮಾಜದ ಇತರ ಯುವಕರಿಗೂ ಕೂಡ ಒಂದು ಸ್ಫೂರ್ತಿ ನೀಡುವಂತದ್ದು ಈ ಕಾರ್ಯಕ್ರಮದ ಉದ್ದೇಶ. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆಗೆ ಅವರ ಕುಟುಂಬದವರನ್ನು ನಾವು ಆಹ್ವಾನಿಸುತ್ತಿದ್ದೇವೆ. ಬನ್ನಿ ಪ್ರತಿಭೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸೋಣ ಎಂದು ಸಚಿವ ಕೃಷ್ಣ ಬೈರೇಗೌಡ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page