ಬೆಂಗಳೂರು: ರಾಜ್ಯದಲ್ಲಿ ಬರಗಾಲದ ತೀವ್ರತೆ ಹೆಚ್ಚಿದೆ. 200ಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಪರಿಸ್ಥಿತಿ ತೀವ್ರವಾಗಿದೆ. ಆದ ಕಾರಣ ಬರಗಾಲದ ಕುರಿತಾದ ಚರ್ಚೆ ನಡೆಸಲು ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
“ಶಾಸಕರು ಮತ್ತು ಜನಪ್ರತಿನಿಧಿಗಳು ಬರ ಕುರಿತು ವಿವರವಾಗಿ ಚರ್ಚಿಸಲು ಬಯಸಿದ್ದಾರೆ. ಸಚಿವರು ಹಾಗೂ ಉಪಮುಖ್ಯಮಂತ್ರಿಗಳು ಶಾಸಕರ ಪ್ರಶ್ನೆಗಳು ಮತ್ತು ಸಲಹೆಗಳಿಗೆ ಕಲಾಪದಲ್ಲಿ ಅಧಿಕೃತವಾಗಿ ಉತ್ತರ ನೀಡಲಿದ್ದಾರೆ” ಎಂದರು.
ಸರ್ವಪಕ್ಷ ನಿಯೋಗ ದೆಹಲಿಗೆ
ಸರ್ವಪಕ್ಷ ನಿಯೋಗ ದೆಹಲಿಗೆ ತೆರಳುವ ಬಗ್ಗೆ ಕೇಳಿದಾಗ, “ಬರ ಪರಿಹಾರ ಮತ್ತು ಕೇಂದ್ರದ ನೆರವಿನ ಕುರಿತು ಚರ್ಚಿಸಲು ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲಾ ಪಕ್ಷದ ನಾಯಕರು ಸಮ್ಮತಿಸಿದ್ದಾರೆ” ಎಂದು ಹೇಳಿದರು.
