ಸಮಗ್ರ ಸುದ್ದಿ

ವಿಬಿಜಿ ರಾಮ್ ಜಿ 90:10ರ ಅನುಪಾತಕ್ಕೆ ಮೇಲ್ಮನೆಯಲ್ಲಿ ಈಶ್ವರ ಖಂಡ್ರೆ ಒತ್ತಾಯ

Share

ಬೆಂಗಳೂರು: ವಿಬಿಜಿ ರಾಮ್ ಜಿಯಡಿ ಸುಗ್ಗಿ ಕಾಲದಲ್ಲಿ 60 ದಿನ ಉದ್ಯೋಗ ನೀಡದಿರುವ ಅಂಶ ಹಿಂಪಡೆಯಬೇಕು ಮತ್ತು ರಾಜ್ಯಗಳ ಮೇಲೆ ಹೊರೆಹಾಕುವ ಶೇ.60:40ರ ಅನುಪಾತದ ಬದಲು ಮನ್ರೇಗಾದಲ್ಲಿದ್ದಂತೆ 90:10ರ ಅನುಪಾತ ಮುಂದುವರಿಸಬೇಕು ಎಂದು ಸರ್ಕಾರ ಒತ್ತಾಯಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿಂದು ಬರದ ಮೇಲಿನ ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, 2 ತಿಂಗಳು ಕೆಲಸ ನೀಡದಿದ್ದರೆ ಕಾರ್ಮಿಕರ ಶೋಷಣೆ ಆಗುತ್ತದೆ, ಇದನ್ನು ರಾಜ್ಯ ಸರ್ಕಾರ ವಿರೋಧಿಸಿದೆ ಎಂದು ಸ್ಪಷ್ಟಪಡಿಸಿದರು.

ಆರ್ಥಿಕ ಹೊರೆ ನಡುವೆಯೂ ವಿಬಿಜಿ ರಾಮ್ ಜಿಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ:

20 ವರ್ಷದಲ್ಲಿ ಮನ್ರೇಗಾದಲ್ಲಿ 61 ಸಾವಿರ ಕೋಟಿ ರೂ.ವೆಚ್ಚವಾಗಿದ್ದು 182 ಕೋಟಿ ಮಾನವ ದಿನ ಸೃಜನೆ ಮಾಡಲಾಗಿತ್ತು. ಕೇಂದ್ರ ಸರ್ಕಾರ 56 ಸಾವಿರ ಕೋಟಿ ರೂ. ಭರಿಸಿದ್ದರೆ, ರಾಜ್ಯ ಸರ್ಕಾರ ಕೇವಲ 4800 ಕೋಟಿ ನೀಡಿತ್ತು. ಆದರೆ ವಿಬಿಜಿ ರಾಮ್ ಜಿಯಲ್ಲಿ ಮಹಾತ್ಮಾ ಗಾಂಧೀ ಹೆಸರನ್ನೇ ತೆಗೆದು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹಾಕಲಾಗಿದೆ. ಹೀಗಾಗಿ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೂ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಆದರೆ ಈ ಆರ್ಥಿಕ ಹೊರೆಯ ನಡುವೆಯೂ ಕರ್ನಾಟಕ ದೇಶದಲ್ಲೇ 5ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.


Share

You cannot copy content of this page