ಸಮಗ್ರ ಸುದ್ದಿ

ಬೀದರ ಜಿಲ್ಲೆಯಲ್ಲಿ ಶರಣ ಸ್ಮಾರಕಗಳ ಗುರುತಿಸಿ : ಹೆಚ್.ಕೆ.ಪಾಟೀಲ

Share

ಬೆಳಗಾವಿ : ಬೀದರ ಜಿಲ್ಲೆಯಲ್ಲಿ ಶರಣ ಸ್ಮಾರಕ ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಕಳುಹಿಸಿದಲ್ಲಿ ಪರಿಗಣಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಾಹರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್ ಕೆ ಪಾಟೀಲ ಅವರು ಹೇಳಿದರು.

ವಿಧಾನಪರಿಷತ್ತಿನಲ್ಲಿಂದು ಸದಸ್ಯರಾದ ಡಾ.ಎಂ.ಜಿ.ಮುಳೆ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ‌ ಸಚಿವರು, ಬೀದರ್ ಮತ್ತು ಬಸವಕಲ್ಯಾಣವನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಿ ಟೂರಿಸಂ ಸರ್ಕೂಟ್ ಎಂದು ಘೋಷಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ
ಬೀದರ್ ತಾಲೂಕಿನಲ್ಲಿ 9 ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ 5 ಪ್ರವಾಸಿ ತಾಣಗಳನ್ನು ಈಗಾಗಲೇ ಗುರುತಿಸಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.

2025 ನೇ ಆಗಸ್ಟ್ 7 ರ ಸರ್ಕಾರದ ಆದೇಶದಲ್ಲಿ
ಈಗಾಗಲೇ ಗುರುತಿಸಿದ ಪ್ರವಾಸಿ ತಾಣಗಳ ಪಟ್ಟಿಗೆ ಇನ್ನಷ್ಟು ಶರಣ ಸ್ಮಾರಕಗಳು ಸೇರಬೇಕು ಎಂದು ಡಾ.ಮುಳೆ ಅವರು ಸರ್ಕಾರಕ್ಕೆ ಸಲಹೆ ಮಾಡಿದರು.


Share

You cannot copy content of this page