ಸಮಗ್ರ ಸುದ್ದಿ

ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

Share

ಬೆಳಗಾವಿ: ಪ್ರತ್ಯೇಕವಾದ ಸಮಿತಿಯೊಂದನ್ನು ರಚಿಸಿ, ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ತರ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅವರಿಗೆ ಸಹಾಯಹಸ್ತ ಕಲ್ಪಿಸುವುದಾಗಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ವಸತಿ ಹಾಗೂ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪುನರ್ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ನಿಯಮ 330ರ ಮೇರೆಗೆ ಸದಸ್ಯರಾದ ನಿರಾಣಿ ಹಣಮಂತಪ್ಪ ರುದ್ರಪ್ಪ ಹಾಗೂ ಪಿ.ಹೆಚ್. ಪೂಜಾರ್ ಅವರು ಪರಿಷತ್ತಿನಲ್ಲಿ ಗುರುವಾರ ಮಂಡಿಸಿದ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರವು ಸಂತ್ರಸ್ಥರ ನೆರವಿಗೆ ಬದ್ಧವಾಗಿದೆ ಎಂದು ತಿಳಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆಯ ಪ್ರದೇಶದ ಸಂತ್ರಸ್ತರಿಗೆ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ. ಇಲ್ಲಿವರೆಗೆ ಈ ಭಾಗದಲ್ಲಿ ಶೇ.50ರಷ್ಡು ಮಾತ್ರ ನೀರಾವರಿಯಾಗಿದ್ದು, ಇದುವರೆಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಆಗಿರುವುದಿಲ್ಲ. ಇದುವರೆಗೆ 146 ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿಗಳು ಸರಿಯಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂದು ನೋಡಿಲ್ಲ. ಇನ್ನೂ 20 ವರ್ಷಗಳ ಕಳೆದರೆ ಅಲ್ಲಿನ ಜನ ಘೇರಾವು ಹಾಕುವ ಪರಿಸ್ಥಿತಿ ಬರಬಹುದು. ಆಣೆಕಟ್ಟು ವಿಸ್ತರಣೆಯಿಂದಾಗಿ ಬಾಧಿತವಾದ ಗ್ರಾಮಗಳಲ್ಲಿನ ಸಂತ್ರಸ್ಥರ ಪರಿಸ್ಥಿತಿ ಸರಿ ಇಲ್ಲ ಎಂದು ಸದಸ್ಯರಾದ ಪಿ ಎಚ್ ಪೂಜಾರ ಹಾಗೂ ನಿರಾಣಿ ಹಣಮಂತ ರುದ್ರಪ್ಪ ಅವರು ಸದನದಲ್ಲಿ ನೋವು ವ್ಯಕ್ತಪಡಿಸಿದರು.


Share

You cannot copy content of this page