ಬೆಂಗಳೂರು: ಈ ತಿಂಗಳ 26 ರಂದು ಕೇರಳಂನಲ್ಲಿ ಮುಂಗಾರು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನೈಋತ್ಯ ಮಾನ್ಸೂನ್ ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯ ಕೆಲವು ಭಾಗಗಳು, ಅಂಡಮಾನ್ ಸಮುದ್ರದ ಅನೇಕ ಭಾಗಗಳು ಮತ್ತು ಅಂಡಮಾನ್ ದ್ವೀಪಗಳು ಮತ್ತು ಸಂಪೂರ್ಣ ನಿಕೋಬಾರ್ ದ್ವೀಪಗಳತ್ತ ಸಾಗುತ್ತಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಉಪ-ಹಿಮಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ 3-4 ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಜೂನ್ 1ರಂದು ಕೇರಳಂ ಪ್ರವೇಶಿಸಿ ನಂತರ ಕರ್ನಾಟಕಕ್ಕೆ ವಿಸ್ತರಿಸುತ್ತಿದ್ದ ಮುಂಗಾರು ಈ ಸಲ ನಿಗದಿತ ಸಮಯಕ್ಕಿಂತ ಐದು ದಿನ ಮುಂಚಿತವಾಗಿಯೇ ಪ್ರವೇಶಿಸುತ್ತಿದೆ.
