ಸಮಗ್ರ ಸುದ್ದಿ

ಜೂನ್ 13 ಮತ್ತು 14ರಂದು ಬೆಂಗಳೂರಿನಲ್ಲಿ 6ನೇ ‘ರೈಸ್ ಕಾನ್‌ಕ್ಲೇವ್’ ಸಮಾವೇಶ| ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ಚಾಲನೆ

Share

​ಬೆಂಗಳೂರು: ದೇಶದ ಪ್ರಮುಖ ರಾಷ್ಟ್ರೀಯ ತಂತ್ರಜ್ಞಾನ ಸಮಾವೇಶವಾದ “ರೈಸ್ ಕಾನ್‌ಕ್ಲೇವ್ 2026” (RISE Conclave 2026) ರ 6ನೇ ಆವೃತ್ತಿಯು ಇದೇ ಜೂನ್ 13 ಮತ್ತು 14 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ವತಿಯಿಂದ ಬೃಹತ್ ಕಾರ್ಯಕ್ರಮವನ್ನು
ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಿ.ಎಸ್.ಐ.ಆರ್ – ಎನ್.ಎ.ಎಲ್ ನ ನಿರ್ದೇಶಕ ಡಾ. ಅಭಯ್ ಎ ಪಶೀಲ್ಕರ್ ಅವರು ತಿಳಿಸಿದರು.

ಇಂದು ಸಿ.ಎಸ್.ಐ.ಆರ್ – ಎನ್.ಎ.ಎಲ್ ನ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿ ವಿಷಯ ತಿಳಿಸಿದ ಅವರು, ವಿಕ್ಷಿತ್ ಭಾರತ್ @ 2047 ಗುರಿಯೊಂದಿಗೆ ಭಾರತ ಸರ್ಕಾರದ Whole-of-Science and Innovation ದೂರದೃಷ್ಟಿಗೆ ಪೂರಕವಾಗಿ ಈ ಸಮಾವೇಶವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಬೆಂಗಳೂರು ಆವೃತ್ತಿಯು Innovation & Entrepreneurship Driven Growth for Viksit Bharat 2047 (ವಿಕಸಿತ ಭಾರತ 2047 ಕ್ಕಾಗಿ ನಾವೀನ್ಯತೆ ಮತ್ತು ಉದ್ಯಮಶೀಲತೆ ಆಧಾರಿತ ಬೆಳವಣಿಗೆ) ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ನಡೆಯುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯಗಳು ಹಾಗೂ ಕೈಗಾರಿಕೆಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಗುರಿ ಹೊಂದಿದೆ.

ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಗಂಭೀರ ಚರ್ಚೆ:

ಈ ಸಮಾವೇಶದಲ್ಲಿ ಏರೋಸ್ಪೇಸ್ ತಂತ್ರಜ್ಞಾನಗಳ ಬೆಳವಣಿಗೆ (Aerospace Technologies for Growth), ಎಲ್ಲರಿಗೂ ಕೃತಕ ಬುದ್ಧಿಮತ್ತೆ (AI for Everyone – Navigating Technology, Society & Ethics) ಮತ್ತು
​ಕೃಷಿ-ಆಹಾರ ಮಾರುಕಟ್ಟೆ ಸಂಪರ್ಕ (AGRI-FOOD Nexus 2026) ಈ ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಗಂಭೀರ ಚರ್ಚೆಗಳು ನಡೆಯಲಿವೆ ಎಂದು ತಿಳಿಸಿದರು.

ದೈತ್ಯ ಕಂಪನಿಗಳು, ತಜ್ಞರು ಭಾಗಿ:

​ಈ ಸಮಾವೇಶದಲ್ಲಿ ಬಾಷ್ (Bosch), ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ (TASL), ಏರ್‌ಬಸ್ (Airbus), ಎಲ್‌ ಆಂಡ್ ಟಿ (L&T), ಬಿಇಎಂಎಲ್ (BEML), ಷ್ನೇಡರ್ (Schneider), ಐಬಿಎಂ (IBM), ಲೀಶಿಯಸ್ (Licious) ಮತ್ತು ಹ್ಯಾಪಿಲೋ (Happilo) ನಂತಹ ಜಾಗತಿಕ ದೈತ್ಯ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರೊಂದಿಗೆ ಇಸ್ರೋ (ISRO), ಐಐಎಸ್‌ಸಿ (IISc), ಐಐಎಂ-ಬೆಂಗಳೂರು, ಐಐಎಂ-ನಾಗ್ಪುರ ಮತ್ತು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ 25ಕ್ಕೂ ಹೆಚ್ಚು ಪ್ರಮುಖ ಉಪನ್ಯಾಸಕರು ಮತ್ತು ತಜ್ಞರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.

ಯುವ ಸಂಶೋಧಕರಿಗೆ ಸುವರ್ಣಾವಕಾಶ:
​ಸಮಾವೇಶದಲ್ಲಿ ಏರೋಸ್ಪೇಸ್, ಆಹಾರ ತಂತ್ರಜ್ಞಾನ ಮತ್ತು ಎಐ ಕ್ಷೇತ್ರಗಳ 800ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ನವೋದ್ಯಮಗಳು (Start-ups) ಪಾಲ್ಗೊಳ್ಳುತ್ತಿದ್ದಾರೆ. ನವೋದ್ಯಮಗಳ ಉತ್ಪನ್ನಗಳ ಪ್ರದರ್ಶನದ ಜೊತೆಗೆ, ವಿದ್ಯಾರ್ಥಿಗಳಿಗೆ ಮತ್ತು ಯುವ ಸಂಶೋಧಕರಿಗೆ ಪ್ರಾಯೋಗಿಕ ಜ್ಞಾನ ನೀಡಲು CSIR, ICAR, ICMR ಮತ್ತು ಇಸ್ರೋ ಸಂಸ್ಥೆಗಳನ್ನೊಳಗೊಂಡ ವಿಜ್ಞಾನ ಮತ್ತು ತಂತ್ರಜ್ಞಾನ ಪೆವಿಲಿಯನ್ (S&T Pavilion) ಪ್ರಮುಖ ಆಕರ್ಷಣೆಯಾಗಿರಲಿದೆ.

ಮಾಧ್ಯಮ ಗೋಷ್ಠಯಲ್ಲಿ ಸಿ.ಎಸ್‌.ಐ.ಆರ್ – ಸಿ.ಎಫ್.ಟಿ.ಆರ್.ಐ ನ ನಿರ್ದೇಶಕರಾದ ಡಾ. ಗಿರಿಧರ್ ಪರ್ವತಂ ಮತ್ತು ಸಿ.ಎಸ್‌.ಐ.ಆರ್ – 4ಪಿ.ಐ ನ ನಿರ್ದೇಶಕರಾದ ಡಾ. ಜಿ ಕೆ ಪಾತ್ರ ಅವರು ಉಪಸ್ಥಿತರಿದ್ದರು.


Share

You cannot copy content of this page